Thursday, January 23, 2025
ಸುದ್ದಿ

ಕೊರೋನಾ ಭಯ ಗೆದ್ದು ಬಂದ ಕಾರವಾರ ನಿವಾಸಿ ಅಭಿಷೇಕ್ – ಕಹಳೆ ನ್ಯೂಸ್

ಕಾರವಾರ : ಕೊರೊನ ಭಯದ ನಡುವೆ ಪ್ರಿನ್ಸಸ್ ಹಡಗಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರವಾರ ಮೂಲದ ಅಭಿಷೇಕ್ ಮಗರ್ ಇದೀಗ ಮನೆ ಸೇರಿದ್ದಾರೆ.

ಉದ್ಯೋಗಕ್ಕಾಗಿ ಕಳೆದ ಆರು ತಿಂಗಳ ಹಿಂದೆ ತೆರಳಿದ್ದ ಇವರ, ಒಂದು ತಿಂಗಳ ಕಾಲ ಜಪಾನಿನ ಯೊಕೋಮಾದ ಸಮುದ್ರ ಮದ್ಯೆ ಹಡಗಿನಲ್ಲೆ ಕಾಲಕಳೆದಿದ್ದರು. ಹಡಗಿನಲ್ಲಿ ಇದ್ದವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಆದರೆ ಅಭಿಷೇಕ್ ಅದೃಷ್ಟ ಚೆನ್ನಾಗಿತ್ತು ಹೀಗಾಗಿ ಇದೀಗ ಆರೋಗ್ಯವಾಗಿ ತಾಯಿನಾಡು ಸೇರಿದ್ದಾರೆ.
ಕೊರೋನಾ ವನವಾಸದಿಂದ ಮನೆ ಸೇರಿದಕ್ಕೆ ಸಂತಸ ವ್ಯಕ್ತಪಡಿಸಿದ ಅಭಿμÉೀಕ್, ಹಡಗಿನಲ್ಲಿ ಆತಂಕ ಇತ್ತು. ಆದ್ರೆ ತಾನು ದೈರ್ಯಗೆಡಲಿಲ್ಲ, ಸುರಕ್ಷಿತ ಕ್ರಮ ವಹಿಸಿದಕ್ಕೆ ಇವತ್ತು ಆರೋಗ್ಯಕರವಾಗಿ ಬಂದು ಮನೆ ಸೇರಿದ್ದೇನೆ. ನನ್ನ ಜೊತೆ ಇದ್ದವರಿಗೆ ಸೋಂಕು ಇತ್ತು ಆದ್ರೂ ತಾನು ದೈರ್ಯಗೆಡಲಿಲ್ಲ. ಆದ್ರೆ ಮನಸಲ್ಲಿ ಭಯ ಇತ್ತು ಎಂದು ಒಂದು ತಿಂಗಳ ಭಯದ ಅನುಭವ ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು