Thursday, January 23, 2025
ಸುದ್ದಿ

ಕಡಬದಾದ್ಯಂತ ಸುತ್ತಾಡುತ್ತಿದ್ದಾರೆ ವಿದೇಶದಿಂದ ಆಗಮಿಸಿದ ವ್ಯಕ್ತಿ – ಇನ್ನು ಎಚ್ಚೆತ್ತುಕೊಳ್ಳದ ಕಡಬದ ಆರೋಗ್ಯ ಇಲಾಖೆ – ಕಹಳೆ ನ್ಯೂಸ್

 

ಕಡಬ: ಕೆಲ ದಿನಗಳ ಹಿಂದೆ ಚೀನಾದಲ್ಲಿ ಉದ್ಯೋಗದಲ್ಲಿದ್ದ ಬಲ್ಯದ ವ್ಯಕ್ತಿ ಊರಿಗೆ ಆಗಮಿಸಿ ಕಡಬ ಸಮುದಾಯ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ ತೆರಳಿದ್ದು ಅದೇ ದಿನ ದುಬೈಯಿಂದ ಆಗಮಿಸಿದ್ದ ಕೋಡಿಂಬಾಳದ ವ್ಯಕ್ತಿ ಆಸ್ಪತ್ರೆಗೆ ಬಂದು ತಪಾಸಣೆಗೊಳಗಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಅಂತೆಯೇ ಮಾ.11ರಂದು ಅಬುದಾಬಿಯಿಂದ ಆಗಮಿಸಿದ್ದ ಕುಟ್ರುಪಾಡಿಯ ವ್ಯಕ್ತಿಯನ್ನು ಮಾ.14ರಂದು ಒತ್ತಾಯಪೂರ್ವಕವಾಗಿ ಕಡಬ ಸಮುದಾಯ ಆಸ್ಪತ್ರೆಗೆ ಕರೆ ತಂದು ತಪಾಸಣೆಗೊಳಪಡಿಸಲಾಗಿದೆ, ಈ ಮದ್ಯೆ ವಿದೇಶದಿಂದ ಆಗಮಿಸಿದವರ ಮಾಹಿತಿ ಮತ್ತು ಅವರ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮ ವಹಿಸುವ ಬಗ್ಗೆ ಕಡಬ ಆರೋಗ್ಯ ಇಲಾಖೆ ವಿಫಲವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

 


ಕುಟ್ರುಪಾಡಿ ಗ್ರಾಮದ ಬಡಬೆಟ್ಟು ಮೂಲಕ್ಕರ ಮನೆಯ ಕ್ಸೇವಿಯರ್ ಎಂಬವರು ಅಬುದಾಬಿಯಿಂದ ಕಡಬಕ್ಕೆ ಆಗಮಿಸಿ ಮೂರು ದಿನ ಕಳೆದರೂ ಶೀತ, ಕೆಮ್ಮಿನಿಂದ ಬಳಲುತ್ತಿದ್ದ ಆತ ಸ್ಥಳೀಯವಾಗಿ ಯಾವುದೇ ವೈದ್ಯಕೀಯ ತಪಾಸಣೆಗೆ ಒಳಪಡದೆ ಇದ್ದುದು ಗ್ರಾಮದ ಜನರ ಭೀತಿಗೆ ಕಾರಣವಾಗಿತ್ತು.

 

ಊರಿಗೆ ಬಂದ ಆತ ಆಸ್ಪತ್ರೆಗೆ ತಪಾಸಣೆಗೆ ತೆರಳದೆ ಕುಟ್ರುಪಾಡಿ ಪಂಚಾಯತ್, ಚರ್ಚ್ ಕಾರ್ಯಕ್ರಮ ಸೇರಿದಂತೆ ಊರಿನ ಎಲ್ಲೆಡೆ ಸುತ್ತಾಡುತ್ತಿರುವ ಬಗ್ಗೆ ಸ್ಥಳೀಯರು ಕಡಬ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಅವರನ್ನು ಅಂದೇ ಭೇಟಿ ಮಾಡಿ ಅವರಿಗೆ ಸರಿಯಾದ ನಿರ್ದೇಶನ ನೀಡುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ, ಈ ಬಗ್ಗೆ ವೈದ್ಯಾಧಿಕಾರಿಯನ್ನು ಸಂಪರ್ಕಗೊಳಿಸಿದರೆ ನಮ್ಮ ಆರೋಗ್ಯ ಕಾರ್ಯಕತರೂ ಆತನನ್ನು ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಪಡಲು ಹೇಳಿದರೂ ಆತ ಬಂದಿಲ್ಲ ಎಂದು ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ದಾರೆ. ಕೊನೆಗೂ ಶನಿವಾರ ಸ್ಥಳೀಯ ಜನರು ಹಾಗೂ ಮಾದ್ಯಮದವರ ಒತ್ತಡದ ಮೇರೆಗೆ ಕ್ಸೇವಿಯರ್ ಅವರು ಕಡಬ ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಪಟ್ಟಿದ್ದಾರೆ.

ವಿದೇಶದಿಂದ ಆಗಮಿಸಿದ ವ್ಯಕ್ತಿಯ ಸಂಪರ್ಕದಲ್ಲಿದ್ದವರಿಗೆ ಭೀತಿ !