Thursday, January 23, 2025
ಸುದ್ದಿ

ಪುಣ್ಚತ್ತಾರು ರವಿ ರೈ ಅವರಿಗೆ ಊರುಗೋಲಾದ ಯುವ ತೇಜಸ್ಸು – ಕಹಳೆ ನ್ಯೂಸ್

ಬಡವರ ಪಾಲಿಗೆ ಬೆಳಕಾಗುತ್ತಿರುವ ಯುವ ತೇಜಸ್ಸು ಟ್ರಸ್ಟ್ ನ 102 ನೇ ಯೋಜನೆ ಪೂರ್ಣಗೊಂಡಿದೆ.

ಕಳೆದ ವರ್ಷ ಎಪ್ರಿಲ್ 22 ರಂದು ಪುಣ್ಚತ್ತಾರು ಸಮೀಪ ಬೊಬ್ಬೆಕೇರಿಯ ಅಬ್ಬಡ ಕಾಲೋನಿಯ ರವಿ ರೈ ಇವರು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಲ ಕಾಲಿಗೆ ತೀವ್ರವಾದ ಏಟು ಬಿದ್ದು ಮೂಳೆ ಮುರಿದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಕಾಲಿನ ಶಸ್ತ್ರಚಿಕಿತ್ಸೆ ಆಗಿ ವರ್ಷಗಳಾದರೂ ಇನ್ನೂ ನಡೆಯಲಾರದ ಸ್ಥಿತಿಯಲ್ಲಿಯೇ ಜೀವನ ಸಾಗಿಸುವಂತಾಗಿದೆ.
ಅತ್ಯಂತ ಕಡು ಬಡತನದಲ್ಲಿರುವ ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗು, ಸದ್ಯದ ಪರಿಸ್ಥಿತಿಯಲ್ಲಿ ಸಂಸಾರದ ಜವಾಬ್ದಾರಿಯನ್ನು ರವಿಯವರ ಪತ್ನಿಯೇ ನಿಭಾಯಿಸಬೇಕಾಗಿದೆ,
ಕೂಲಿ ಕೆಲಸ ಮಾಡಿ ರವಿ ಅವರ ಪ್ರತಿ ತಿಂಗಳ ವೈದ್ಯಕೀಯ ಚಿಕಿತ್ಸೆಗೆ ಮತ್ತು ಮೂವರು ಪುಟ್ಟ ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆಯ ಹೊರೆಯನ್ನು ಹೊರುವ ಸಂಕಷ್ಟ ಎದುರಾಗಿದೆ.
ಇವರ ಸಂಕಷ್ಟದ ಪರಿಸ್ಥಿತಿಗೆ ಸ್ಪಂದಿಸಿದ ಯುವ ತೇಜಸ್ಸು ಟ್ರಸ್ಟ್ ವತಿಯಿಂದ ಇಂದು 20,000/- ರೂಪಾಯಿಯ ಚೆಕ್ ನ್ನು ರವಿ ಅವರ ಮನೆಗೆ ಭೇಟಿ ನೀಡಿ ಹಸ್ತಾಂತರ ಮಾಡಲಾಯಿತು.
ತೀರ ಬಡತನದಲ್ಲಿರುವ ಈ ಕುಟುಂಬಕ್ಕೆ ಇನ್ನಷ್ಟು ದಾನಿಗಳ, ಸಂಘ ಸಂಸ್ಥೆಗಳ ಧನಸಹಾಯದ ನೆರವಿನ ಅವಶ್ಯಕತೆ ಇದೆ.
ದಾನಿಗಳು ಈ ಅಸಹಾಯಕ ಕುಟುಂಬಕ್ಕೆ ಆಸರೆಯಾಗಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು