Tuesday, November 26, 2024
ಸುದ್ದಿ

ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕೊರೊನಾ ವೈರಸ್ ಜಾಗೃತಿ ಸಭೆ-ಕಹಳೆ ನ್ಯೂಸ್.

ಮಂಗಳೂರು: ಕೊರೊನ ಬಗ್ಗೆ ಮುಂಜಾಗ್ರತಾ ಕ್ರಮಕ್ಕಾಗಿ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿನ್ನೆ ಸಭೆ ನಡೆಯಿತು.

ಸಭೆಯನ್ನು ನಂತರ ಕೊರೊನಾ ಬಗ್ಗೆ ಪ್ರತಿಕ್ರಿಯೆ ನೀಡಿದ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೋರನಾ ವೈರಸ್ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಆಸ್ಪತ್ರೆಯ ಅಧಿಕಾರಿಗಳ ಜೊತೆ, ಹೋಟೆಲ್ ಮಾಲಕರು,ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ. ದಕ್ಷಿಣ ಕನ್ನಡದಲ್ಲಿ ಸುಮಾರು 27 ಶಂಕಿತ ಪ್ರಕರಣ ದಾಖಲಾಗಿತ್ತು, ಅದರಲ್ಲಿ 17 ಜನರಿಗೆ ಯಾವುದೇ ಸೋಂಕಿಲ್ಲದ ಕಾರಣ ಅವರನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಮತ್ತೆ 17 ಜನರಿಗೆ ಯಾವುದೇ ಸೋಂಕಿನ ಲಕ್ಷಣ ಇಲ್ಲವಾದ್ದರಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು. ಇನ್ನುಳಿದ 10 ಜನರ ಪೈಕಿ 7 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯಕ್ಕೆ 3 ಜನರನ್ನು ಶಂಕಿತರು ಎಂದು ನೀಗಾ ಇಡಲಾಗಿದ್ದು, ಇದುವರೆಗೆ ಒಂದೇ ಒಂದು ಅಧಿಕೃತ ಪ್ರಕರಣ ದಾಖಲಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಪೂರ್ಣ ಪ್ರಮಾಣದ ಜಾಗೃತ ವಹಿಸಲಾಗುತ್ತದೆ. ಮತ್ತು ವಿದೇಶಿ ಪ್ರಯಾಣಿಕರ ಮೇಲೆ ವಿಶೇಷ ಗಮನ ವಹಿಸಲಾಗುದೆ, ಕೊರೊನಾ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು