Thursday, January 23, 2025
ಸುದ್ದಿ

ಪುರ ಸಭೆ ವಿರುದ್ಧ ಸಜೀಪ ಗ್ರಾಮ ಪಂಚಾಯತ್ ಅಧ್ಯಕ್ಷ ಗರಂ-ಕಹಳೆ ನ್ಯೂಸ್

 

ಬಂಟ್ವಾಳ: ಸಜೀಪ ನಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿನಡ್ಕ ಪದವಿನಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸೋಮವಾರದಿಂದ ಒಣ ತ್ಯಾಜ್ಯಗಳನ್ನು ಸಂಸ್ಕರಿಸುವಂತೆ ಮಂಗಳೂರು ಸಹಾಯಕ ಆಯುಕ್ತರ ಆದೇಶ ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಈ ಆದೇಶಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ನಾಸಿರ್ ವಿರೊಧ ವ್ಯಕ್ತಪಡಿಸಿದ್ದಾರೆ. ಸಜೀಪ ನಡು ಗ್ರಾಮ ಪಂಚಾಯತ್‍ಗೆ ಅನ್ಯಾಯವಾಗುತ್ತಿದೆ, ಪುರಸಭೆಯ ದಬ್ಬಾಳಿಕೆ ಬಲಿಯಾಗುತ್ತಿದೆ ಇದರ ವಿರುದ್ಧ ನಾವು ಪ್ರತಿಭಟಿಸುವುದು ನಮ್ಮ ಕರ್ತವ್ಯ ವಾಗಿದೆ ಎಂದು ಅವರು ಹೇಳಿದ್ದಾರೆ. ಘಟಕ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ ಆದ್ರೆ ಅಲ್ಲಿನ ನಿವಾಸಿಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸಲಿ, ಶಾಲೆ ಅಂಗನವಾಡಿ ಮಸೀದಿಗಳಿಗೆ ಸೂಕ್ತವಾದ ವ್ಯವಸ್ಥೆ ಮಾಡಲಿ ಎಂದಿದ್ದಾರೆ. ಪುರಸಭೆಗೆ ತ್ಯಾಜ್ಯ ಹಾಕುವುದೇ ಮುಖ್ಯವಾದರೆ ಪಂಚಾಯತ್‍ಗೆ ಗ್ರಾಮದ ಜನರ ಸುರಕ್ಷತೆ ಮುಖ್ಯ. ಹೀಗಾಗಿ ತ್ಯಾಜ್ಯ ಸಂಸ್ಕರಣೆಗೆ ವಿರೋಧ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು