Friday, January 24, 2025
ಸುದ್ದಿ

ರಾಜಕೇಸರಿ ಕುತ್ಲೂರು ಉದ್ಘಾಟನಾ ಸಮಾರಂಭ ಪ್ರಯಕ್ತ ನಡೆದ ಬೃಹತ್ ಉಚಿತ ವೈದ್ಯಕೀಯ ತಪಸಣಾ ಶಿಬಿರ-ಕಹಳೆ ನ್ಯೂಸ್

ಬೆಳ್ತಂಗಡಿ: ರಾಜಕೇಸರಿ(ರಿ)ಬೆಳ್ತಂಗಡಿ ಇದರ ನೂತನ ಸಹ ಸಂಸ್ಥೆಯಾದ ರಾಜಕೇಸರಿ ಕುತ್ಲೂರು ಇದರ ಉದ್ಘಾಟನಾ ಪ್ರಯುಕ್ತ ಕೆ.ಎಸ್. ಹೆಗ್ಡೆ ದೇರಳಕಟ್ಟೆ ಆಸ್ಪತ್ರೆ ಇವರ ಜಂಟಿ ಆಶ್ರಯದಲ್ಲಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುತ್ಲೂರಿನಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಸಣಾ ಶಿಬಿರ ಇಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಖಿಲ ಕರ್ನಾಟಕ ರಾಜಕೇಸರಿ(ರಿ) ಇದರ ಸಂಸ್ಥಾಪಕರಾದ “ದೀಪಕ್.ಜಿ” ನೆರವೇರಿಸಿದರು. ರಾಜಕೇಸರಿ(ರಿ)ಬೆಳ್ತಂಗಡಿ ಹಾಗೂ ರಾಜಕೇಸರಿ ಕುತ್ಲೂರು ಇದರ ಅಧ್ಯಕ್ಷರಾದ “ಲೋಕೇಶ್” ಕುತ್ಲೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಶ್ರಫ್ ಆಲಿ ಕುಂಞÂ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ,”ಮೋಹನ್ ಕುಲಾಲ್” ನಿವೃತ್ತ ಯೋಧರು ಅಳದಂಗಡಿ,”ದೀಪಕ್.ಜಿ” ಬೆಳ್ತಂಗಡಿ ರಾಜಕೇಸರಿ ಸಂಸ್ಥಾಪಕರು,”ರಮೇಶ್ ಪರವ’ ದೈವ ನರ್ತಕರು ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ‘ಶಿವಪ್ರಸಾದ್ ಅಜಿಲರು” ಸತ್ಯದೇವತೆ ಇದರ ಆಡಳಿತ ಮೊಕ್ತೇಸರರು ಅಳದಂಗಡಿ, “ಶ್ರೀ ಲೋಲಕ್ಷ.ಕೆ” ಪೆÇಲೀಸ್ ಉಪನಿರೀಕ್ಷಕರು ವೇಣೂರು,”ಹೇಮಂತ್ ಶೆಟ್ಟಿ”.ಪಿ.ಆರ್. ಓ,. ಕೆ.ಎಸ್ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ, “ದೇವದಾಸ್.ಕೆ” ಸಾಲ್ಯಾನ್ ಹಿಂದೂ ಯುವ ಶಕ್ತಿ ಆಲಡ್ಕ ಕ್ಷೇತ್ರ ಇದರ ಸಂಚಾಲಕರು, ಶ್ರೀಮತಿ “ಯಶೋಧ” ಅಧ್ಯಕ್ಷರು ಗ್ರಾಮ ಪಂಚಾಯತ್ ನಾರವಿ,ಶ್ರೀಮತಿ “ಪ್ರಮೀಳಾ.ಆರ್” ಭಟ್ ಗ್ರಾಮ ಪಂಚಾಯತ್ ಸದಸ್ಯರು ನಾರವಿ, “ಸಂತೋμï” ಕಾಂತಬೆಟ್ಟು ಸದಸ್ಯರು ಗ್ರಾಮ ಪಂಚಾಯತ್ ನಾರವಿ,”ಗುರುಪ್ರಸಾದ್” ಹಿಂದೂ ಮುಖಂಡರು ನಾರಾವಿ, “ಸುರೇಶ್” ಕುತ್ಲೂರು ಶಿವಶಕ್ತಿ ಫ್ರೆಂಡ್ಸ್ ಕುತ್ಲೂರು,”ಪ್ರಭಾಕರ” ದೇವಾಡಿಗ ಎಸ್.ಡಿ.ಎಂ,ಸಿ ಅಧ್ಯಕ್ಷರು ಕುತ್ಲೂರು,”ಸುಮನಾಜಿ” ಶಾಲಾ ಮುಖ್ಯೋಪಧ್ಯಾಯರು ಕುತ್ಲೂರು, “ರಂಜಿತ್” ಸಹ ಸಂಚಾಲಕರು ನಾರಾವಿ,”ರವಿಪ್ರಸಾದ್” ಗೋಕುಲ ಕುತ್ಲೂರು, ಇವರುಗಳು ಉಪಸ್ಥಿತರಿದ್ದರು. ಹಾಗೂ ಈ ಕಾರ್ಯಕ್ರಮದಲ್ಲಿ 250ಕ್ಕಿಂತ ಪಾಲ್ಗೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು