Friday, January 24, 2025
ರಾಜಕೀಯ

ಬಿಜೆಪಿ ಯುವ ನಾಯಕ ಸಹಜ್ ರೈ ನಿವಾಸಕ್ಕೆ ಹಿಂದೂ ಫಯರ್ ಬ್ರಾಂಡ್, ಬೋಪಾಲ್ ಸಂಸದೆ ಸಾಧ್ವೀ ಪ್ರಜ್ಞಾ ಸಿಂಗ್ ಠಾಕೊರ್‌ ಭೇಟಿ ; ಸಾಧ್ವೀ ಜೀಯವರಿಗೆ ಜಯರಾಮ್ ರೈ ದಂಪತಿಗಳಿಂದ ಗೌರವ ಸನ್ಮಾನ – ಕಹಳೆ ನ್ಯೂಸ್

ಪುತ್ತೂರು: ಮಧ್ಯಪ್ರದೇಶ ಭೋಪಾಲ್ ಕ್ಷೇತ್ರದ ಸಂಸದೆ ಹಿಂದೂ ಫಯರ್ ಬ್ರಾಂಡ್ ಸಾಧ್ವೀ ಪ್ರಜ್ಞಾ ಸಿಂಗ್ ಅವರು ಮಾ.15ರಂದು ಬಿಜೆಪಿ ಯುವ ನಾಯಕ ಸಹಜ್ ರೈ ಬಳಜ್ಜ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಬಳಜ್ಜ ಎಸ್.ಬಿ.ಜಯರಾಮ ರೈ ಅವರ ಜಯಹರಿ ನಿವಾಸಕ್ಕೆ ಭೇಟಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಅವರನ್ನು ಯುವ ನಾಯಕ ಸಹಜ್ ರೈ ಬಳಜ್ಜ ದಂಪತಿಗಳು ಹಾಗೂ ಜಯರಾಮ ರೈ ದಂಪತಿಗಳು ಗೌರವಿಸಿ ಸನ್ಮಾನ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಧ್ಯಾಹ್ನ ವೇಳೆ ಸಾಧ್ವೀ ಅವರು ಎಸ್.ಬಿ.ಜಯರಾಮ ರೈ ಅವರ ಮನೆಗೆ ಭೇಟಿ ನೀಡಿದರು. ಈ ಸಂದರ್ಭ ಅವರಿಗೆ ಸುಮಂಗಳೆಯರು ಶಾಲು, ಫಲಪುಷ್ಪ ಹೊದಿಸಿ ಸನ್ಮಾನಿಸಿದರು. ಎಸ್.ಬಿ.ಜಯರಾಮ ರೈ, ಅವರ ಪತ್ನಿ ಹರಿಣಾಕ್ಷಿ ಜೆ.ರೈ, ಪುತ್ರ ಬಿಜೆಪಿ ಯುವನಾಯಕ ಸಹಜ್ ರೈ ಬಳಜ್ಜ, ಸೊಸೆ ದೀಕ್ಷಾ ಎಸ್ ರೈ, ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಸುದಾಕರ್ ಜೀತ್ , ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ಫೋಟೋ : ಅರುಣ್ ಸ್ಟುಡಿಯೋ, ಆರ್ಲಪದವು