ನೆಲ್ಯಾಡಿಯ ಹೋಟೆಲ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಡೀಸಲ್,ಜಿಲೆಟಿನ್ ಕಡ್ಡಿ ಹಾಗೂ ಮಧ್ಯ ವಶಕ್ಕೆ ; ಆರೋಪಿ ಸತೀಶ್ ಅಂದರ್ – ಕಹಳೆ ನ್ಯೂಸ್
ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಎಂಜಿರ ಸಮೀಪದ ಲಾವತ್ತಡ್ಕದಲ್ಲಿ ಹೋಟೆಲ್‌ವೊಂದಕ್ಕೆ ದಾಳಿ ನಡೆಸಿದ ಕಡಬ ಪೊಲೀಸರು ಅಕ್ರಮವಾಗಿ ಸಂಗ್ರಹಿಸಿದ್ದ ಡಿಸೇಲ್, ಜಿಲೆಟಿನ್ ಕಡ್ಡಿ ಹಾಗೂ ಮದ್ಯ ವಶಪಡಿಸಿಕೊಂಡು ಆರೋಪಿ, ಹೋಟೆಲ್ ಮಾಲಕ ಸತೀಶ್ ಎಂಬಾತನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ 75ರ ಲಾವತ್ತಡ್ಕದಲ್ಲಿ ಗುಂಡ್ಯ ಹೊಳೆ ಬದಿ ಅಕ್ರಮ ಕಟ್ಟಡ ನಿರ್ಮಿಸಿ ಅದರಲ್ಲಿ ‘ಜನನಿ’ಹೆಸರಿನ ಹೋಟೆಲ್ ನಡೆಸಲಾಗುತ್ತಿತ್ತು. ಇಲ್ಲಿ ಅಕ್ರಮವಾಗಿ ಮದ್ಯ ಮಾರಾಟ, ಟ್ಯಾಂಕರ್‌ಗಳಿಂದ ಡಿಸೇಲ್ ಕಳ್ಳವುಗೈದು ಮಾರಾಟ, ಗುಂಡ್ಯ ಹೊಳೆಯಲ್ಲಿ ಮೀನು ಹಿಡಿಯಲು ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳ ಸಂಗ್ರಹ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಮಾ.15ರಂದು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಸದ್ರಿ ಹೋಟೆಲ್‌ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರಾಜ್ಯ ಗೃಹ ಇಲಾಖೆಗೆ ಸಾರ್ವಜನಿಕರು ದೂರು ನೀಡಿದ್ದರು. ಇದೇ ದೂರಿನನ್ವಯ ಕಡಬ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಕಳೆದ ತಿಂಗಳು ಇದೇ ಹೋಟೆಲ್‌ನಲ್ಲಿ ಅಕ್ರಮ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಮೆಸ್ಕಾಂನ ವಿಜಿಲೆನ್ಸ್ ತಂಡ ದಂಡ ವಿಧಿಸಿತ್ತು.