Breaking News : ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ತಾತ್ಕಾಲಿಕ ದೇಗುಲ ; ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೂರ್ತಿಗೆ ಪ್ರಥಮ ಪೂಜೆಯು ಮಾ.25ರಂದು ಸಲ್ಲಿಸುವ ಮುಖಾಂತರ ಯೋಗಿ ಆದಿತ್ಯನಾಥ್ ದೇಗುಲದ ಚಟುವಟಿಕೆಗಳಿಗೆ ಚಾಲನೆ – ಕಹಳೆ ನ್ಯೂಸ್
ಅಯೋಧ್ಯೆ ಮಾ.16 : ಶ್ರೀರಾಮನ ಪೂಜೆಗಾಗಿ ನೂತನವಾದ ಸಣ್ಣ ದೇಗುಲವೊಂದನ್ನು ಆಯೋಧ್ಯೆಯಲ್ಲಿ ನಿರ್ಮಿಸಲಾಗಿದೆ. ಶೀಘ್ರದಲ್ಲೇ ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಪ್ರಾರಂಭಿಸಲಾಗುತ್ತದೆ. ಮೂರ್ತಿಗೆ ಪ್ರಥಮ ಪೂಜೆಯು ಮಾ.25ರಂದು ಸಲ್ಲಿಸುವ ಮುಖಾಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೇಗುಲದ ಚಟುವಟಿಕೆಗಳಿಗೆ ಚಾಲನೆ ನೀಡಲಿದ್ದಾರೆ.
ನವದೆಹಲಿಯಲ್ಲಿ ಈ ಪುಟ್ಟ ದೇಗುಲವನ್ನು ನಿರ್ಮಿಸಿ ಅಯೋಧ್ಯೆಗೆ ತರಲಾಗಿದೆ.! ಬುಲೆಟ್ ಪ್ರೂಫ್ ಫೈಬರ್ ಸಾಮಾಗ್ರಿಯಿಂದ ಇದನ್ನು ನಿರ್ಮಿಸಲಾಗಿದೆ. ಅಗ್ನಿ ಹಾಗೂ ಜಲ ನಿರೋಧಕವೂ ಇದಾಗಿದೆ. ಹವಾನಿಯಂತ್ರಿತ ವ್ಯವಸ್ಥೆಯೂ ಇಲ್ಲಿದೆ ಎನ್ನಲಾಗಿದೆ.
ದಶಕಗಳ ಹಿಂದೆ ವಿವಾದಿತ ಬಾಬ್ರಿ ಕಟ್ಟಡದಲ್ಲಿದ್ದ ರಾಮಲಲ್ಲಾ ವಿಗ್ರಹವನ್ನು 1992ರಲ್ಲಿ ನಡೆದಿದ್ದ ಗಲಭೆಯ ಹಿನ್ನೆಲೆಯಲ್ಲಿ ಸಮೀಪದಲ್ಲಿದ್ದ ತಾತ್ಕಾಲಿಕ ಟೆಂಟ್‌ವೊಂದರಲ್ಲಿ ಇರಿಸಿ ಪೂಜೆ ಮಾಡಲಾಗುತ್ತಿತ್ತು. ಈಗ ಆ ಮೂರ್ತಿಗೆ 27 ವರ್ಷಗಳ ನಂತರ ದೇಗುಲದಲ್ಲಿ ಪೂಜೆಗೊಳ್ಳುವ ಅವಕಾಶ ಒದಗಲಿದೆ.
ಸಾವಿರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ರಾಮನವಮಿ ಮೇಳ ಈ ಬಾರಿ ಕೊರೊನಾ ಭೀತಿ ಹಿನ್ನೆಲೆ ರದ್ದಾಗುವ ಸಾಧ್ಯತೆ ಇದೆ.