Sunday, January 19, 2025
ಸುದ್ದಿ

ಮಂಗಳೂರಿನಲ್ಲಿ ಮತ್ತೊಮ್ಮೆ ಸದ್ದು ಮಾಡಿದ ವೇಶ್ಯಾವಾಟಿಕೆ ಜಾಲ | ಪ್ಲಾಟಿನಲ್ಲಿ ರಾಜರೋಶವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಬಂಧನ – ಕಹಳೆ ನ್ಯೂಸ್

ಮಂಗಳೂರು : ಮಂಗಳೂರಿನ ಅಪಾರ್ಟ್ ಮೆಂಟ್ ಒಂದರಲ್ಲಿ ಮತ್ತೆ ವೇಶ್ಯಾವಾಟಿಕೆ ಜಾಲ ವೊಂದು ಪತ್ತೆಯಾಗಿದೆ.ಕೊಡಿಯಾಲ್ ಗುತ್ತಿನ ಕುಶ ಅಪಾರ್ಟ್ಮೆಂಟ್ ನ ಪ್ಲಾಟ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳಾ ಪಿಂಪ್ ಸೇರಿದಂತೆ ಇನ್ನೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂದಿಸಿದರು.

ಮೂರೂ ತಿಂಗಳ  ಹಿಂದೆ ಇದೇ ರೀತಿಯ ವೇಶ್ಯಾವಾಟಿಕೆ ನಡೆಸುತ್ತಿದ್ದ ಎರಡೂ ಪ್ಲಾಟ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂದಿತ ಆರೋಪಿ ಮಹಿಳೆಯೂ ಈ ಪ್ಲಾಟ್ ನಲ್ಲಿ ವಾಸವಿದ್ದು ,ದೇಶದ ನಾನ ಮೂಲೆಯ ಯುವತಿಯರನ್ನು ಬಳಸಿ ವೇಶ್ಯಾವಾಟಿಕೆ ದಂಧೆ ನಡೆಸುತಿದ್ದಳು.ಇನ್ನೊಬ್ಬ ಬಂದಿತ ಸಹಚಾರ ಅಡ್ಯಾರು ಪದವು ನಿವಾಸಿ ರಿಯಾಸ್ ಅಹಮ್ಮದ್ (35)ನ ಮೂಲಕ ಗ್ರಾಹಕರನ್ನು ಪ್ಲಾಟ್ ಗೆ ಕರೆ ತರುಸುತ್ತಿದ್ದ ಈ ಮಹಿಳೆ ದೂರದೂರಿನಿಂದ  ಕರೆ ತಂದ ಯುವತಿಯರನ್ನು ಬಳಸಿ ಹಣ ಗಳಿಸುತ್ತಿದಳು.

ದಾಳಿಯ ವೇಳೆ ಕೊಲ್ಕತ್ತಾದ ಯುವತಿಯೊಬ್ಬಳನ್ನು ರಕ್ಷಿಸಲಾಗಿದೆ. ಬಂಧಿತರಿಂದ ಒಂದು ಅಟೋ ರಿಕ್ಷಾ ,ರೂ.1800 ಸೇರಿದಂತೆ ಸುಮಾರು 1.61 ಲಕ್ಷ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದ್ದು ,ಸಿಸಿಬಿ ಇನ್ಸ್ ಪೆಕ್ಟರ್ ಶಾಂತರಾಮ ,ಪಿ ಎಸ್ ಐಗಳಾದ ಶ್ಯಾಮ್ ಸುಂದರ್ ಮತ್ತು ಕಬ್ಬಾಳಿ ರಾಜ್ ಹಗುಉಸ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವರದಿ : ಕಹಳೆ ನ್ಯೂಸ್