Friday, January 24, 2025
ಸುದ್ದಿ

ಉಪ್ಪಿನಂಗಡಿ: ಅಕ್ರಮ ಗೋಮಾಂಸ ಸಾಗಾಟದ ವಾಹನ ಪಲ್ಟಿ-ಕಹಳೆ ನ್ಯೂಸ್

ಉಪ್ಪಿನಂಗಡಿ, ಮಾ.17: ಪೊಲೀಸರು ಬೆನ್ನಟ್ಟಿದ ಟೆಂಪೊ ಟ್ರಾವೆಲ್ಲರ್ ವೊಂದು ಉರುಳಿಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಲಾವತ್ತಡ್ಕ ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಉರುಳಿಬಿದ್ದ ಟೆಂಪೊದಲ್ಲಿ ಗೋಮಾಂಸ ಪತ್ತೆಯಾಗಿದ್ದು, ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತೆನ್ನಲಾಗಿದೆ.

ಗುಂಡ್ಯ ಚೆಕ್ ಪೋಸ್ಟ್‌ನಲ್ಲಿ ಇಂದು ಬೆಳಗ್ಗಿನ ಜಾವ 5:30ರ ಸುಮಾರಿಗೆ ಹಾಸನ ಕಡೆಯಿಂದ ವೇಗವಾಗಿ ಬರುತ್ತಿದ್ದ ಟೆಂಪೊ ಟ್ರಾವೆಲರ್ ನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ ಪೊಲೀಸ್ ಸೂಚನೆಯನ್ನು ಕಡೆಗಣಿಸಿ ಟೆಂಪೊ ವೇಗವಾಗಿ ನೆಲ್ಯಾಡಿಯತ್ತ ಸಾಗುತ್ತಿದ್ದಂತೆ ಗಸ್ತಿನಲ್ಲಿದ್ದ ಪೊಲೀಸರು ಅದನ್ನು ಬೆನ್ನಟ್ಟಿದ್ದಾರೆ. ಸುಮಾರು 15 ಕಿ.ಮೀ. ಪೊಲೀಸರು ಬೆನ್ನಟ್ಟಿದ ವೇಳೆ ಟಂಪೊ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆಯನ್ನಲಾಗಿದೆ. ಈ ವೇಳೆ ಚಾಲಕ ಸಹಿತ ಅದರಲ್ಲಿದ್ದವರು ಪರಾರಿಯಾಗಿದ್ದಾರೆ. ಉರುಳಿಬಿದ್ದ ಟೆಂಪೊದಲ್ಲಿ ಸುಮಾರು ಗೋಮಾಂಸ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಾಹನ ಸಮೇತ ಮಾಂಸವನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದು, ಆರೋಪಿಗಳ ಪತ್ತೆಗಾಗಿ ಶೋಧ ಮುಂದುವರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು