Friday, January 24, 2025
ಸುದ್ದಿ

Breaking News : ಕೊರೋನಾ ಎಫೆಕ್ಟ್ | ಆರೋಗ್ಯ ಸಚಿವ ಶ್ರೀರಾಮಲು ಜಿಲ್ಲೆಗೆ ಭೇಟಿ ; ಇಂದಿನಿಂದ (ಮಾ.17) ದಕ್ಷಿಣ ಕನ್ನಡ ಜಿಲ್ಲಾದ್ಯಂತ ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲಾ ಸೇವೆಗಳು ಸ್ಥಗಿತಕ್ಕೆ ಆದೇಶ ಕಹಳೆ ನ್ಯೂಸ್

ಮಂಗಳೂರು : ಕೊರೋನಾ ವೈರಸ್ ಸೋಂಕಿನಿಂದಾಗಿ ದ.ಕ. ಜಿಲ್ಲೆಯ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುತ್ತಿರುವ ಎಲ್ಲಾ ಸೇವೆಗಳನ್ನು ರದ್ದುಗೊಳಿಸುವಂತೆ ಡಿ.ಸಿ. ಸಿಂಧೂ ಬಿ. ರೂಪೇಶ್ ಸೂಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾ.17ರಂದು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಘೋಷಿಸಲಾಗಿದೆ. ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ವಿಶೇಷ ಪೂಜೆ, ಹೋಮ-ಹವನಕ್ಕೆ ಅವಕಾಶವಿರುವುದಿಲ್ಲ, ಉತ್ಸವಗಳಲ್ಲಿ ಸಿಬ್ಬಂದಿಗಳು ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ಡಿ.ಸಿ. ಸಿಂಧೂ ಬಿ. ರೂಪೇಶ್ ಸೂಚಿಸಿದ್ದಾರೆ. ಕೊರೋನಾ ವೈರಸ್ ಸೋಂಕಿನಿಂದಾಗಿ ರಾಜ್ಯದಲ್ಲಿ ಬಂದ್ ಅನಿವಾರ್ಯವಾಗಿದ್ದು, ಸೋಂಕು ನಿಯಂತ್ರಣಕ್ಕೆ ಬರುವವರೆಗೆ ಬಂದ್ ಮುಂದುವರಿಯುವುದಾಗಿ ಮಂಗಳೂರಿನಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಕೊರೋನಾ ವೈರಸ್‌ನಿಂದಾಗಿ ಕಳೆದೊಂದು ವಾರದಿಂದ ಎಲ್ಲಾ ಧಾರ್ಮಿಕ ಕಂದ್ರಗಳು ಸೇರಿದಂತೆ ಸಭೆ-ಸಮಾರಂಭಗಳಲ್ಲಿ ಜನರ ಭಾಗವಹಿಸುವಿಕೆ ಇಳಿಮುಖವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೋನಾ ವೈರಸ್ ಸೋಂಕಿನಿಂದಾಗಿ ವಿಶ್ವಾದ್ಯಂತ ಸಾವಿರಾರು ಮಂದಿ ಸಾವಿಗೀಡಾಗಿರುವ ಹಿನ್ನಲೆಯಲ್ಲಿ ಮತ್ತು ಮಹಾಮಾರಿ ಕೊರೋನಾ ವೈರಾಣು ತೀವ್ರಗತಿಯಲ್ಲಿ ಹಬ್ಬುವಿಕೆಯನ್ನು ತಡೆಗಟ್ಟಲು ಮಾ.14ರಿಂದ ಯಾವುದೇ ಸಭೆ-ಸಮಾರಂಭಗಳನ್ನು ನಡೆಸದಿರಲು ರಾಜ್ಯ ಸರಕಾರ ಆದೇಶ ಹೊರಡಿಸಿತ್ತು, ಈಗ ಮತ್ತೆ ಜಿಲ್ಲಾಡಳಿತ ಈ ಆದೇಶವನ್ನು ಮುನ್ನೆಚ್ಚರಿಕಾ ಕ್ರಮವಾಗಿ ಹೊರಡಿಸಿದೆ.