Thursday, January 23, 2025
ಸುದ್ದಿ

Breaking News : ಕೊರೊನಾ ಎಫೆಕ್ಟ್ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೆಕ್ಷನ್ 144(3) ಜಾರಿ : ಜಾತ್ರೆ, ದೇವಳದಲ್ಲಿ ಸೇವೆ ಸಹಿತ ಎಲ್ಲಾ ಕಾರ್ಯಕ್ರಮಗಳ ಕಟ್ಟುನಿಟ್ಟಿನ ತಡೆಗೆ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶ – ಕಹಳೆ ನ್ಯೂಸ್

ಮಂಗಳೂರು, ಮಾರ್ಚ್ 17 : ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ಸಾರ್ವಜನಿಕರು ಕೆಲವು ವಿಶೇಷ ಕ್ರಮಗಳನ್ನು ಅನುಸರಿಸುವಂತೆ ಜಿಲ್ಲಾಡಳಿತ ವು ಆದೇಶ ಹೊರಡಿಸಿದೆ. ಸಾರ್ವಜನಿಕ ರ ಆರೋಗ್ಯ ಹಿತದೃಷ್ಟಿಯಿಂದ ದ.ಕ ಜಿಲ್ಲೆಯಲ್ಲಿ ಜರುಗುವ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಜಾತ್ರೆಗಳು ಸಭೆ ಸಮಾರಂಭಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾತ್ರೆ ಉತ್ಸವ ಸಾಮೂಹಿಕ ವಿವಾಹ ಗಳು ಹಾಗೂ ಇನ್ನಿತರ ಜನಸಂದಣಿ ಯಂತಹಾ ಕಾರ್ಯಕ್ರಮಗಳಿಂದ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಸದ್ರಿ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ನಿಯಂತ್ರಿಸುವುದು ಮನಗಂಡು ಜಿಲ್ಲಾಡಳಿತ ವು ಸಿ.ಆರ್.ಪಿ.ಸಿ ಸೆಕ್ಷನ್ 144(3) ರಂತೆ ಆದೇಶವನ್ನು ಹೊರಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

1. ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ನಡೆಯುವ ಉತ್ಸವ ಜಾತ್ರೆಗಳಲ್ಲಿ ಸಿಬ್ಬಂದಿ ಮಾತ್ರ ಭಾಗವಹಿಸತಕ್ಕದ್ದು. ಸಾರ್ವಜನಿಕ ರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

2. ದೇವಸ್ಥಾನಗಳಲ್ಲಿ ದೇವರ ದರ್ಶನ ವನ್ನು ಹೊರತು ಪಡಿಸಿ ಎಲ್ಲಾ ಸೇವೆ ಹಾಗೂ ತಂಗುವುದನ್ನು ರದ್ದು ಪಡಿಸಲಾಗಿದೆ.

3. ದೇವಸ್ಥಾನ , ಮಸೀದಿ ಚರ್ಚ್ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಗುಂಪು ಗುಂಪಾಗಿ ಸಾರ್ವಜನಿಕರು‌ ಪ್ರವೇಶಿಸಬಾರದು.

4. ಬೇಸಿಗೆ ಶಿಬಿರ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸದಂತೆ ‌ಸೂಚಿಸಲಾಗಿದೆ.

5. ಬೀಚ್ ಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

6. ಮದುವೆ ಇನ್ನಿತರ ಹೆಚ್ಚಿನ ಸಾರ್ವಜನಿಕರು ಸೇರುವ ಸಮಾರಂಭವನ್ನು ಸರಳವಾಗಿ ನಡೆಸುವಂತೆ ಸೂಚಿಸಿದೆ.

ಪಿಜಿಗಳಿಗೂ ಕೆಲವೊಂದು ಕಟ್ಟುನಿಟ್ಟಿನ ಸೂಚನೆಯನ್ನು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳಾದ ಸಿಂದೂ ರೂಪೇಶ್ ಆದೇಶಿಸಿದ್ದಾರೆ.