ಕಡಬ: ಕೊೈಲ ಗ್ರಾಮ ಪಂಚಾಯತಿಗೆ ಒಳಪಡುವ ಕೆಮ್ಮಾರ ಸಮೀಪದ ಬಡಿಲದ ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿಗೆ ಬಿಡುಗಡೆಗೊಂಡಿರುವ ಅನುದಾನವನ್ನು ಶಾಸಕರ ಆದೇಶವನ್ನು ಮೀರಿ ದುರ್ಬಳಕೆ ಮಾಡಿ ನೇರ ಅಧ್ಯಕ್ಷೆಯ ಮನೆಗೆ ಕಾಂಕ್ರೀಟೀಕರಣ ಮಾಡುವ ಮೂಲಕ ಅಲ್ಪಸಂಖ್ಯಾತ ನಾಗರಿಕರ ಅವಕಾಶಗಳನ್ನು ಕಸಿದು ಅನ್ಯಾಯ ಎಸಗಿದ್ದು ಅಲ್ಲದೆ ಶಾಸಕರ ಆದೇಶದಂತೆ ಆತೂರುಬೈಲು ಅಲ್ಪಸಂಖ್ಯಾತರ ಕಾಲನಿಗೆ ಮಂಜೂರಾಗಿದ್ದ ಅನುದಾನವನ್ನು ನೆತ್ತರಕೆರೆಗೆ ವರ್ಗಾಯಿಸಿ ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ.
ಈ ಬಗ್ಗೆ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಗೆ ಸ್ಥಳಿಯ ಪಂಚಾಯತ್ ಸದಸ್ಯ ಕೆ ಎ ಸುಲೈಮಾನ್ ದೂರು ಸಲ್ಲಿಸಿದ್ದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೇ ಆರೋಪಿತರ ಪರವಾಗಿ ಕೆಲಸ ಮಾಡಿದ್ದಾರೆ ಎನ್ನುವ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.
ಅಲ್ಲದೆ ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಮಾಹಿತಿ ಹಕ್ಕು ಆಯೋಗಕ್ಕೆ ಸಾಮಾಜಿಕ ಹೋರಾಟಗಾರ ಅಝೀಝ್ ಬಿ.ಕೆ.ಯವರು ಅರ್ಜಿ ಸಲ್ಲಿಸಿ ತಿಂಗಳು ಕಳೆದರೂ ಈ ಬಗ್ಗೆ ಯಾವುದೇ ಮಾಹಿತಿ ನೀಡದೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕೂಡ ಕಡೆಗಣಿಸಿದೆ.
ಈ ಒಂದು ಗಂಭೀರ ಸ್ವರೂಪದ ಘಟನೆಯನ್ನು ರಾಜಕೀಯ ಪ್ರೇರಿತವಾದ ಹೇಳಿಕೆ ಎನ್ನುವ ಮೂಲಕ ಪತ್ರಿಕಾಗೋಷ್ಠಿ ಕರೆದು ಉಡಾಫೆಯ ಉತ್ತರ ನೀಡಿದ್ದು, ಸಂಬಂಧಿಸಿದ ದಾಖಲೆಯನ್ನು ತನಿಖಾ ಅಧಿಕಾರಿಗಳು ಸರಿಯಾಗಿ ಪರಿಶೀಲಿಸದೇ ಸ್ಥಳೀಯ ಪಂಚಾಯತ್ ಸದಸ್ಯರ ಹೇಳಿಕೆಗಳನ್ನು ಗಣನೆಗೆ ತೆಗೆದುಕೊಳ್ಳದೇ ಅಗೌರವವನ್ನು ತೋರಿದ್ದು, ಇದರಲ್ಲಿ ಪಂಚಾಯತ್ ಅಧ್ಯಕ್ಷೆ ಮತ್ತು ಇನ್ನಿತರ ಪಂಚಾಯತ್ ಸದಸ್ಯರು ಈ ಬಗ್ಗೆ ಧ್ವನಿಯೆತ್ತದಂತೆ ಅವ್ಯವಹಾರದ ಪಾಲು ನೀಡಿರುವ ಬಗ್ಗೆ ಸ್ಥಳೀಯ ನಾಗರಿಕರು ಶಂಕೆ ವ್ಯಕ್ತಪಡಿಸಿದ್ದಾರೆ,,
ಈ ಒಂದು ಆರೋಪಕ್ಕೆ ಪುಷ್ಟಿ ನೀಡುವಂತೆ ಅಧ್ಯಕ್ಷೆ ಹೇಮಾ ಶೆಟ್ಟಿ ಕರೆದಿರುವ ಪತ್ರಿಕಾಗೋಷ್ಠಿಯಲ್ಲಿ ಭೀಪಾತುಮ್ಮ ಇವರ ಹೆಸರನ್ನು ಸೇರಿಸಲಾಗಿತ್ತು.ಇವರಲ್ಲಿ ಈ ಬಗ್ಗೆ ಜಿಲ್ಲಾ ಪಂಚಾಯತ್ ಸದಸ್ಯ ಸರ್ವೋತ್ತಮ ಗೌಡರನ್ನೊಳಗೊಂಡಂತೆ ಗ್ರಾಮಸ್ಥರು ವಿಚಾರಿಸಿದಾಗ ನನಗರಿವಿಲ್ಲದೇ ನನ್ನ ಹೆಸರನ್ನು ಹಾಕಲಾಗಿದೆ. ಈ ಬಗ್ಗೆ ನನ್ನ ಬಳಿ ಯಾವುದೇ ಚರ್ಚೆ ನಡೆದಸಿಲ್ಲ, ಈ ವಿಚಾರವನ್ನು ಬಹಿರಂಗವಾಗಿ ಹೇಳಲು ಸಿದ್ದನಿದ್ದೇನೆ ಹಾಗೂ ಕೆ.ಎ. ಸುಲೈಮಾನ್ ರವರ ಆರೋಪವು ನೂರಕ್ಕೆ ನೂರರಷ್ಟು ಸತ್ಯ ಎಂದು ಹೇಳಿದರು.
ಅದೇ ರೀತಿ ಅನ್ಯಾಯಕ್ಕೆ ಒಳಗಾದ ಅಲ್ಪಸಂಖ್ಯಾತರ ಕಾಲೊನಿಯ ಪರಿಶೀಲನೆಗಾಗಿ ಆಗಮಿಸಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಸರ್ವೊತ್ತಮ ಗೌಡ ಸ್ಥಳ ಪರಿಶೀಲನೆ ನಡೆಸಿದ್ದು ಇದೊಂದು ದೊಡ್ಡ ಮಟ್ಟಿನ ಅವ್ಯವಹಾರ ಮತ್ತು ಅಲ್ಪಸಂಖ್ಯಾತರಿಗೆ ಮಾಡಿದ ಅನ್ಯಾಯವಾಗಿದೆ, ಉನ್ನತ ಮಟ್ಟಿನಲ್ಲಿ ಈ ಬಗ್ಗೆ ಚರ್ಚಿಸಿ ನ್ಯಾಯ ಒದಗಿಸಿಕೊಡುವ ಭರವಸೆಯನ್ನು ನೀಡಿದರು, ಈ ಸಂದರ್ಭದಲ್ಲಿ ಕ್ಯೊಲ ಒಂದನೇ ವಾರ್ಡ್ ಸದಸ್ಯರಾದ ಕೆಎ ಸುಲೈಮಾನ್ ಅನ್ಯಾಯದ ವಿರುದ್ಧ ಕಾನೂನಾತ್ಮಕ ಹೋರಾಟದ ಮೂಲಕ ಸ್ಥಳೀಯ ನಾಗರಿಕರ ಜೊತೆಗೂಡಿ ನ್ಯಾಯ ಪಡೆಯುವವರೆಗೂ ಹೋರಾಟ ಮುಂದುವರಿಯಲಿದೆ ಹಾಗೂ ಗೆಲ್ಲಿಸಿದ ಸ್ಥಳೀಯ ನಾಗರಿಕರಿಗೆ ಅನ್ಯಾವಾಗಲು ಬಿಡುವುದಿಲ್ಲ,,, ನಿಮ್ಮ ಸಹಕಾರ ಕೂಡಾ ಅತ್ಯಗತ್ಯ ಎಂದು ಈ ಸಂದರ್ಭದಲ್ಲಿ ಹೇಳಿದರು. ಈ ವೇಳೆ ಸಾಮಾಜಿಕ ಹೋರಾಟಗಾರ ಅಝೀಝ್ ಬಿ.ಕೆ. ರಾಮಕುಂಜ ಪಂಚಾಯತ್ ಸದಸ್ಯರಾದ ಯತೀಶ್ ಕುಮಾರ್, ಅಡ್ವೊಕೇಟ್ ಕಬೀರ್ ಕೆಮ್ಮಾರ ಕೆಮ್ಮಾರ ಶಾಲೆಯ ಎಸ್‍ಡಿಎಂಸಿ ಮಾಜಿ ಅಧ್ಯಕ್ಷೆ ಸೆಲಿಕತ್, ಸ್ಥಳೀಯ ಗ್ರಾಮಸ್ಥರಾದ ಆದಂ ಕ್ಯೊಲ, ಅಬ್ಬಾಸ್, ಎನ್‍ಎ ಇಸಾಕ್, ಇಬ್ರಾಹಿಂ ಬಡಿಲ, ಹಂಝ ಬಡ್ಡಮೆ, ರವೂಫ್ ಬಡಿಲ, ಜುನೈದ್, ಜಲೀಲ್ ಎನ್‍ಎ , ಮುಂತಾದ ಹಲವಾರು ನಾಗರಿಕರು ಉಪಸ್ಥಿತರಿದ್ದರು