Thursday, January 23, 2025
ಸುದ್ದಿ

ಪುತ್ತೂರಿನಲ್ಲಿ ಸಂಭವಿಸಿದ್ದ ರಸ್ತೆ ಅಪಘಾತ ಪ್ರಕರಣ ; ಆರೋಪಿ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು: ಸುಮಾರು 5 ವರ್ಷಗಳ ಹಿಂದೆ ಪುತ್ತೂರು ತಾಲೂಕು ಕಬಕ ಗ್ರಾಮದ ನೆಹರುನಗರ ಎಂಬಲ್ಲಿ ನಡೆದಿದ್ದ ಅಪಘಾತ ಪ್ರಕರಣವೊಂದರಲ್ಲಿ ಆರೋಪಿಯೆನ್ನಲಾಗಿದ್ದ ಟೂರಿಸ್ಟ್ ಬಸ್ಸು ವಾಹನದ ಚಾಲಕ ರಾಜ ಪಿ. ರವರನ್ನು ಪುತ್ತೂರಿನ ಮಾನ್ಯ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಮ್. ನ್ಯಾಯಾಲಯವು ನಿರಪರಾಧಿಯೆಂದು ಬಿಡುಗಡೆಗೊಳಿಸಿದೆ.

ದಿನಾಂಕ 18-01-2015 ರಂದು ಪುತ್ತೂರು ತಾಲೂಕು ಕಬಕ ಗ್ರಾಮದ ನೆಹರುನಗರ ಎಂಬಲ್ಲಿ ರಾತ್ರಿ 10-15 ಗಂಟೆಯ ಸಮಯದಲ್ಲಿ ಟಿ ಎನ್-39-ಬಿ ಹೆಚ್-5449 ನಂಬ್ರದ ಟೂರಿಸ್ಟ್ ಬಸ್ಸು ವಾಹನದ ಚಾಲಕ ರಾಜ ಪಿ.ರವರು ಪುತ್ತೂರು – ಮಾಣಿ ರಾಜ್ಯ ಹೆದ್ದಾರಿಯಲ್ಲಿ, ಮಾಣಿ ಕಡೆಯಿಂದ ಪುತ್ತೂರು ಕಡೆಗೆ ಅಜಾಗರೂಕತೆಯಿಂದ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ, ಪುತ್ತೂರು ಕಡೆಯಿಂದ ಮಾಣಿ ಕಡೆಗೆ ಗೋಪಾಲರವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗೋಪಾಲರವರ ತಲೆಗೆ ತೀವ್ರ ತರಹದ ಗಾಯಗೊಂಡು ಚಿಕಿತ್ಸೆಯ ಬಗ್ಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯ ಬಳಿ ತಲುಪಿದಾಗ ಅಪಘಾತದಿಂದ ತೀವ್ರ ತರಹದ ಗಾಯಗೊಂಡು ಮೃತಪಟ್ಟಿರುತ್ತಾರೆ. ಅಲ್ಲದೇ ಕಾರಿನಲ್ಲಿದ್ದ ಜಯಂತ ಮತ್ತು ಯೋಗೀಶ್ ರವರು ಗಾಯಗೊಂಡಿರುತ್ತಾರೆ. ಆರೋಪಿಯ ತಪ್ಪಿನಿಂದಲೇ ಅಪಘಾತ ಸಂಭವಿಸಿದೆ ಎಂಬಿತ್ಯಾದಿ ಅರೋಪವನ್ನು ಮಾಡಿ ಪುತ್ತೂರು ಸಂಚಾರ ಪೆÇೀಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದ್ರಿ ಪ್ರಕರಣದ ಬಗ್ಗೆ ಪುತ್ತೂರು ಸಂಚಾರ ಪೆÇಲೀಸರು ಪ್ರಥಮ ವರ್ಥಮಾನ ವರದಿಯನ್ನು ದಾಖಲಿಸಿಕೊಂಡು ತದನಂತರ ಅಂತಿಮ ವರದಿಯಲ್ಲಿ ವಾಹನ ಚಾಲಕನಾದ ರಾಜ ಪಿ ರವರನ್ನು ಆರೋಪಿಯೆಂದು ಪರಿಗಣಿಸಿ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತದನಂತರ ನ್ಯಾಯಾಲಯವು ಈ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡು ಸುಮಾರು 8 ಸಾಕ್ಷಿಗಳನ್ನು ತನಿಖೆ ನಡೆಸಿ ಪೆÇ್ರೀಸಿಕ್ಯುಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಆರೋಪಿ ರಾಜ.ಪಿ. ತಪ್ಪಿನಿಂದಲೇ ಅಪಘಾತ ಆಗಿದೆ ಎಂದು ಸಾಭೀತುಪಡಿಸಲು ವಿಫಲಗೊಂಡಿದೆ ಎಂದು ತಿರ್ಮಾನಿಸಿ, ಪುತ್ತೂರಿನ ಮಾನ್ಯ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಮ್. ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥರವರು ಆರೋಪಿಯನ್ನು ನಿರಪರಾಧಿ ಎಂದು ಆದೇಶಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಯ ಪರ ಕಜೆ ಲಾ ಚೇಂಬರ್ಸ್‍ನ ವಕೀಲರಾದ ಮಹೇಶ್ ಕಜೆಯವರು ವಾದಿಸಿದ್ದರು.