Thursday, January 23, 2025
ಸುದ್ದಿ

ದೇಯಿ ಬೈದೆತಿ ಮೂಲ ಸಮಾಧಿಯ ಪುಣ್ಯಸ್ಥಳದ ಹಕ್ಕುಪತ್ರವನ್ನು ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ನೇತೃತ್ವ ವಹಿಸಿಕೊಂಡ ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಗೆ ಹಸ್ತಾಂತರಿಸಿದ ಮೇಘನಾಥ ಶೆಟ್ಟಿ & ಕುಟುಂಬಸ್ಥರು – ಕಹಳೆ ನ್ಯೂಸ್

ಪುತ್ತೂರು: ಕಾರಣಿಕ ಪುರುಷರಾದ ಕೋಟಿ-ಚೆನ್ನಯರ ಹುಟ್ಟೂರು ಪಡುಮಲೆ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ ಸಿದ್ಧವಾಗುತ್ತಿದೆ. ಸತ್ಯ, ಧರ್ಮ, ನ್ಯಾಯ, ನೀತಿಗಾಗಿ ಹೋರಾಡಿ ಅಮರರಾದ ತುಳುನಾಡಿನ ವೀರ ಪುರುಷರೆಂದೇ ದೇಶ-ವಿದೇಶಗಳಲ್ಲಿ ಹೆಸರು ಪಡೆದಿರುವ ಕೋಟಿ ಚೆನ್ನಯರು ಹುಟ್ಟಿದ ಮತ್ತು ಅನ್ಯಾಯ, ಅಸಮಾನತೆ, ದೌರ್ಜನ್ಯದ ವಿರುದ್ಧ ಹೋರಾಡಿದ ಹಲವಾರು ಕುರುಹು, ಐತಿಹ್ಯಗಳು ಕಂಡು ಬರುತ್ತಿರುವ ಬಡಗನ್ನೂರು ಗ್ರಾಮದ ಪಡುಮಲೆಯಲ್ಲಿ ಕೋಟಿ ಚೆನ್ನಯರ ತಾಯಿ, ಶ್ರೇಷ್ಠ ನಾಟಿ ವೈದ್ಯೆ ದೇಯಿ ಬೈದೆತಿಯವರ ಮೂಲ ಸಮಾಧಿ ಇರುವ ಪಡುಮಲೆ ಎರುಕೊಟ್ಯ, ಬೆರ್ಮೆರೆ ಗುಡಿ, ತೀರ್ಥಬಾವಿ ಹಾಗೂ ನಾಗನಕಟ್ಟೆ ಸಾನಿಧ್ಯಗಳು ಕೆಲವೇ ಸಮಯದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸಾಕ್ಷಿಯಾಗಲಿದೆ. ಈ ನಿಟ್ಟಿನಲ್ಲಿ ಈ ಜಾಗದ ಹಕ್ಕುದಾರರಾದ ಮೇಘನಾಥ ಶೆಟ್ಟಿ ಮತ್ತು ಕುಟುಂಬದ ೯ ಮಂದಿ ಸದಸ್ಯರು ಪಡುಮಲೆಯ ದೇಯಿ ಬೈದೆತಿ ಸಮಾಧಿಯ ಪುಣ್ಯ ಸ್ಥಳವನ್ನು ಬ್ರಹ್ಮಕಲಶದ ನೇತೃತ್ವ ವಹಿಸಿರುವ ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಹೆಸರಿಗೆ ಹಸ್ತಾಂತರಿಸಿದ್ದಾರೆ.

ಟ್ರಸ್ಟ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳರವರಿಗೆ ಜಾಗದ ಹಕ್ಕು ಪತ್ರದ ದಾಖಲೆಗಳನ್ನು ದಾನದ ರೂಪದಲ್ಲಿ ಪುತ್ತೂರಿನ ಮಿನಿ ವಿಧಾನ ಸೌಧದಲ್ಲಿರುವ ಉಪನೋಂದಣಾಧಿಕಾರಿಯವರ ಕಛೇರಿಯಲ್ಲಿ ಅವರು ಹಸ್ತಾಂತರಿದ್ದಾರೆ. ಈ ಸಂದರ್ಭದಲ್ಲಿ ಟ್ರಸ್ಟ್‌ನ ಗೌರವಾಧ್ಯಕ್ಷರಾದ ಮಾಜಿ ಶಾಸಕ ಎ ರುಕ್ಮಯ್ಯ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶ್ರೀಧರ ಪಟ್ಲ ,ಖಂಚಾಚಿ ಬೆಳ್ತಂಗಡಿಯ ಶೈಲೇಶ್, ಸಂಚಾಲಕರಾದ ರತನ್ ನಾಯಕ್,ಗ್ರಾಮ ಪಂಚಾಯತ್ ಸದಸ್ಯ ಗುರುಪ್ರಸಾದ್ ರೈ , ನವೀನಚಂದ್ರ ರೈ, ನೋಟರಿ ವಕೀಲ ಭಾಸ್ಕರ ಗೌಡ ಕೋಡಿಂಬಾಳರವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜನಮಾನಸದಲ್ಲಿ ನೆಲೆಯೂರಿರುವ ಹಾಗೂ ಕಾರಣಿಕ ಶಕ್ತಿಗಳಾಗಿ ಭಕ್ತರಿಗೆ ಅಭಯ ನೀಡುತ್ತಿರುವ ಮಾತೆ ದೇಯಿ ಬೈದೆತಿ ಮತ್ತು ಕೋಟಿ-ಚೆನ್ನಯರು ಬಾಳಿ ಬದುಕಿದ ಮೂಲ ಸ್ಥಳಗಳ ಮಾಲಕರೂ ಕ್ಷೇತ್ರದ ಆಡಳಿತ ಮೊಕ್ತೇಸರರೂ ಆಗಿರುವ ಚಿತ್ರನಟ ವಿನೋದ್ ಆಳ್ವ ಮತ್ತು ಟ್ರಸ್ಟ್ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಭರದ ತಯಾರಿ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು