Thursday, January 23, 2025
ಸುದ್ದಿ

ಕೊರೊನಾ ವೈರಸ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಪಾಸಿಟಿವ್ ಕೇಸ್ ಇಲ್ಲ : ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ – ಎ.ಸಿ. ಡಾ. ಯತೀಶ್ ಉಳ್ಳಾಲ್ – ಕಹಳೆ ನ್ಯೂಸ್

ಪುತ್ತೂರು: ಕೊರೊನಾ ವೈರಸ್‌ಗೆ ಸಂಬಂಧಿಸಿ ಸೋಂಕು ಹರಡುವ ಕುರಿತು ಎಲ್ಲರಲ್ಲೂ ಭಯ ಇದೆ. ಆದರೆ ಪುತ್ತೂರು ಉಪವಿಭಾಗದಲ್ಲಿ ಯಾವುದೇ ಕೇಸ್ ಇಲ್ಲ. ಆದರೂ ಕೆಲವೊಂದು ಸುಳ್ಳು ಮಾಹಿತಿ ಪ್ರಸರಿಸುವ ದೂರುಗಳು ಬಂದಿವೆ. ಈ ನಿಟ್ಟಿನಲ್ಲಿ ಸುಳ್ಳು ಮಾಹಿತಿ ನೀಡಿ ಜನರನ್ನು ಭಯ ಬೀತರನ್ನಾಗಿ ಮಾಡುವವರ ವಿರುದ್ಧ ಸೈಬರ್ ಕ್ರೈಮ್ ಆಕ್ಟ್ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕಮೀಷನ್ ಡಾ. ಯತೀಶ್ ಉಳ್ಳಾಲ್ ಅವರು ಎಚ್ಚರಿಕೆ ನೀಡಿದ್ದಾರೆ.

ಅವರು ಪತ್ರಕರ್ತರೊಂದಿಗೆ ಮಾತನಾಡಿ ಪುತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರ ನಿನ್ನೆಯ ದಿನ ಸುಮಾರು 526 ಹೊರ ರೋಗಿಗಳು ಬಂದಿದ್ದಾರೆ. ಈ ನಿಟ್ಟಿನಲ್ಲಿ ಯಾವುದೆ ಭಯ ಇಲ್ಲದೆ ಆರೋಗ್ಯ ಕೇಂದ್ರಕ್ಕೆ ಸಾರ್ವಜನಿಕರು ಬರಬಹುದು ಎಂದ ಅವರು ವಿದೇಶದಿಂದ ಬಂದವರು ಮತ್ತು ವಿದೇಶದಿಂದ ಬಂದವರ ಸಂಪರ್ಕದಲ್ಲಿ ಇರುವವರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಆದರೆ ಪುತ್ತೂರು ಉಪವಿಭಾಗದಲ್ಲಿ ಯಾವುದೇ ಕೇಸ್ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಪಾಸಿಟಿವ್ ಕೇಸ್ ಇಲ್ಲ. ಎಲ್ಲವೂ ನೆಗೆಟಿವ್. ಚೆಕ್‌ಅಪ್ ಮಾಡಿಸಲು ಬರುವವರು ಯಾವುದೇ ಭಯ ಪಡಬೇಕಾದ ಅಗತ್ಯವಿಲ್ಲ. ಅವರಿಗೆ ರೋಗ ಬಂದಿದೆ ಎಂದರೆ ಅವರು ನೇರವಾಗಿ ತಾಲೂಕು ವೈದ್ಯಾಧಿಕಾರಿ ಆರೋಗ್ಯಾಧಿಕಾರಿ ಕೌನ್ಸಿಲಿಂಗ್ ಮಾಡಿಕೊಳ್ಳಬೇಕು. ಉಚಿತ ಪರೀಕ್ಷೆ ನೀಡಲಾಗುತ್ತದೆ. ಮೊದಲಾಗಿ ಅಂತವರ ಕುರಿತು ಗೌಪತ್ಯತೆ ಕಾಯ್ದು ಕೊಳ್ಳಲಾಗುತ್ತದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

14 ದಿನ ಮನೆಯಲ್ಲಿ ಕಡ್ಡಾಯ:
ವಿದೇಶದಿಂದ ಬಂದವರು ಅಥವಾ ಅವರ ಸಂಪರ್ಕ ಹೊಂದಿದವರು ಕಡ್ಡಾಯ 14 ದಿನ ಮನೆಯಲ್ಲೇ ಇರಬೇಕು. ಮನೆಯಲ್ಲೇ ಕೊರಂಟೈನ್ ವಾರ್ಡ್ ಮಾಡಿಕೊಳ್ಳಿ. 14 ದಿನದ ಬಳಿಕ ಅವರಿಗೆ ರೋಗದ ಲಕ್ಷಣ ಇದ್ದರೆ ಅದು ಇತರರಿಗೆ ಹರಡುವ ಸಾಧ್ಯತೆ ಇರುವುದರಿಂದ ಅವರನ್ನು ಆಸ್ಪ್ರೆತ್ರೆಯಲ್ಲಿ ಐಸೋಲೇಶನ್ ವಾರ್ಡ್‌ಗೆ ಸೇರಿಸುವುದು. ಈಗಾಗಲೇ ಉಪ್ಪಿನಂಗಡಿ ಮತ್ತು ಪುತ್ತೂರಿನಲ್ಲಿ ಕೊರಂಟೈನ್ ವಾರ್ಡ್ ತಯಾರಿ ಮಾಡಲಾಗಿದೆ. ಪರೀಕ್ಷೆಯಲ್ಲಿ ಶಂಕಿತರ ಮೆಡಿಕಲ್ ವರದಿ ನೆಗೆಟಿವ್ ಬಂದರೆ ಅವರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸಹಾಯಕ ಕಮೀಷನರ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಪ್ರದಾಯ ಚೌಕಟ್ಟಿನಲ್ಲೇ ಧಾರ್ಮಿಕ ಕಾರ್ಯಕ್ರಮ:
ಜನರು ಗುಂಪು ಸೇರುವಲ್ಲಿ ರೋಗ ಹರಡುವ ಲಕ್ಷಣ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಾಥಮಿಕ ಸ್ವಚ್ಛತೆ ಕಾಪಾಡಿಕೊಳ್ಳಿ. ಗುಂಪು ಸೇರುವ ಜಾಗದಲ್ಲಿ ಓಡಾಡದೆ. ಅದಷ್ಟು ಕಾರ್ಯಕ್ರಮ, ಸಭಾ ಕಾರ್ಯಕ್ರಮವನ್ನು ರದ್ದು ಮಾಡಿ. ಧಾರ್ಮಿಕ ಕಾರ್ಯಕ್ರಮ ಸಂಪ್ರದಾಯ ಚೌಕಟ್ಟಿನಲ್ಲಿ ಮಾತ್ರ ಇರಲಿ. ಆಡಂಭರದ ಕಾರ್ಯಕ್ರಮ ಬೇಡ ಎಂದು ಸಹಾಯಕ ಕಮೀಷನರ್ ಹೇಳಿದರು.

ವಿದೇಶದಿಂದ ಬಂದಿರುವವರ ಮಾಹಿತಿಗಾಗಿ: ಆಶಾ ಕಾರ್ಯಕರ್ತೆಯರಿಂದ ಮನೆ ಮನೆ ಭೇಟಿ
ಹೆಚ್ಚಿನ ಕಡೆ ವಿದೇಶದಿಂದ ಬಂದಿರುವವರ ಮೂಲಕ ರೋಗ ಹರಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ವಿದೇಶದಿಂದ ಬಂದಿರುವವರ ಮಾಹಿತಿಗಾಗಿ ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ಮಾಡಲಿದ್ದಾರೆ. ಅವರು ಮನೆಗೆ ಬಂದಾಗ ಪೂರ್ಣ ವಿವರ ಕೊಡಿ. ಅವರಿಗೆ ನೆಗಡಿ, ಜ್ವರ, ಭೇದಿ ಇದ್ದರೆ ಅದು ಕೊರೊನಾ ಎಂದು ಭಯ ಪಡಬೇಕಾಗಿಲ್ಲ. ಆದರೂ ಇದನ್ನು ನಿರ್ಲಕ್ಷ್ಯ ಮಾಡದೆ ಸಾಮಾನ್ಯ ವಿಚಾರಣೆಯ ಪೂರ್ಣ ವಿವರ ಕೊಡುವಂತೆ ಸಹಾಯಕ ಕಮೀಷನರ್ ವಿನಂತಿಸಿದ್ದಾರೆ.