Wednesday, January 22, 2025
ಸುದ್ದಿ

ಕೊರೊನಾ ಎಫೆಕ್ಟ್ : ಜಿಲ್ಲೆಯಲ್ಲಿ ಕಟೀಲು ಮೇಳ ಸೇರಿದಂತೆ ಯಕ್ಷಗಾನ ಮೇಳಗಳ ಯಕ್ಷಗಾನ ಪ್ರದರ್ಶನ ರದ್ದು – ಕಹಳೆ ನ್ಯೂಸ್

ಮಂಗಳೂರು : ಯಕ್ಷಗಾನಕ್ಕೂ ತಟ್ಟಿದ ಕೊರೊನಾ ಭೀತಿ ಹಿನ್ನಲೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ.

ಜಿಲ್ಲಾಡಳಿತ ದ ಆದೇಶದ ಮೇರೆಗೆ ಯಕ್ಷಗಾನ ಪ್ರದರ್ಶನಗಳು ಸ್ಥಗಿತಗೊಳಿಸಲಾಗಿದ್ದು, ಪುರಾಣ ಪ್ರಸಿದ್ಧ ಮೇಳವಾದ ಕಟೀಲು ಯಕ್ಷಗಾನ ಮೇಳದ ತಿರುಗಾಟವನ್ನು ಇಂದಿನಿಂದ ಮುಂದಿನ ಆದೇಶದ ವೆರೆಗೆ ನಿಲ್ಲಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದಿನಿಂದ ಕಟೀಲು ಆರು ಮೇಳಗಳ ಯಕ್ಷಗಾನ ಪ್ರದರ್ಶನ ದೇವಳದ ಮುಂಭಾಗ ಸಂಪ್ರದಾಯದ ಪ್ರಕಾರ ಒಂದು ಗಂಟೆಗಳ ಕಾಲ ನಡೆಯಲಿದೆ. ಸಂಜೆ 7 ಗಂಟೆಯಿಂದ 8 ಗಂಟೆ ತನಕ ಪ್ರದರ್ಶನ ನಡೆಯಲಿದ್ದು, ಯಕ್ಷಗಾನ ನಿಲ್ಲಬಾರದೆಂಬ ನಂಬಿಕೆ ಹಿನ್ನಲೆ ಒಂದು ಗಂಟೆ ಪ್ರದರ್ಶನ ಕ್ಕೆ ಕಟೀಲು ದೇವಸ್ಥಾನದ ಮುಂಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ದ.ಕ ಜಿಲ್ಲಾಡಳಿತದ ಸೂಚನೆ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ಕಟೀಲು ಯಕ್ಷಗಾನ ಮೇಳ ಆಡಳಿತ ಮಂಡಳಿ ಪ್ರಕಟಿಸಿದೆ‌.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಲ್ಲದೆ, ಜಿಲ್ಲೆಯ ಹನುಮಗಿರಿ ಸೇರಿದಂತೆ ಬಹುತೇಕ ಎಲ್ಲಾ ಯಕ್ಷಗಾನ ಮೇಳಗಳು ಮುಂದಿನ ಆದೇಶದ ವರೆಗೆ ತಮ್ಮ ಯಕ್ಷಗಾನ ಪ್ರದರ್ಶನವನ್ನು ಸ್ಥಗಿತಗೊಳಿಸದೆ.