Wednesday, January 22, 2025
ಸುದ್ದಿ

ಕಡಬ ಮೆಸ್ಕಾಂ ಕಚೇರಿಯಲ್ಲಿ ಎ.ಇ.ಇ ಉಢಾಫೆ ಉತ್ತರ : ಕುಡಿಯುವ ನೀರಿಲ್ಲದೇ ಗ್ರಾಹಕರ ಪರದಾಟ -ಕಹಳೆ ನ್ಯೂಸ್

ಕಡಬ: ಇಲ್ಲಿನ ಮೆಸ್ಕಾಂ ಉಪ ವಿಭಾಗದಲ್ಲಿ ವಿದ್ಯುತ್ ಬಿಲ್ ಪಾವತಿಸಲು ಕ್ಯೂ ನಿಲ್ಲುವ ಗ್ರಾಹಕರಿಗೆ ಕುಡಿಯುವ ನೀರು ಒದಗಿಸಬೇಕೆಂದು ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದ್ದು, ಇಂದು ಗ್ರಾಹಕರೊಬ್ಬರು ಕುಡಿಯುವ ನೀರು ಕೇಳಿದಾಗ ಮೆಸ್ಕಾಂ ಅಧಿಕಾರಿ ಕುಡಿಯುವ ನೀರು ಒದಗಿಸುವ ವ್ಯವಸ್ಥೆ ನಮ್ಮಲ್ಲಿಲ್ಲ ಎಂದು ಉಢಾಪೆಯ ಉತ್ತರ ನೀಡಿದ ಬಗ್ಗೆ ಗ್ರಾಹಕರೋರ್ವರು ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.


ಚಿದಾನಂದ ಅವರು ಮೇಲಾಧಿಕಾರಿಗಳಿಗೆ ನೀಡಿದ ದೂರಿನಲ್ಲಿ ವಿವರಿಸಿ, ಕುಟ್ರುಪಾಡಿ ಗ್ರಾಮದ ಕೊಡೆಂಕಿರಿ ನಿವಾಸಿಯಾಗಿರುವ ಇಂದು ನಾನು ಕಡಬ ಮೆಸ್ಕಾಂ ಕಛೇರಿಗೆ ವಿದ್ಯುತ್ ಬಿಲ್(ಕೆ.ಡಿ.ಎ.ಇ.ಎಚ್.13660)ನ ಮೊತ್ತ ಪಾವತಿಸಲು ಹೋಗಿದ್ದೆ, ಆ ಸಂದರ್ಭದಲ್ಲಿ ಬಿಲ್ ಪಾವತಿಸಲು ತುಂಬಾ ಜನರು ಕ್ಯೂನಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ವೃದ್ದರೊಬ್ಬರು ನೀರು ಬೇಕೆಂದು ನನ್ನಲ್ಲಿ ಕೇಳಿದ್ದರು, ಆದರೆ ಅಲ್ಲಿ ಎಲ್ಲಿಯೂ ನೀರು ಕಾಣಲಿಲ್ಲ ಆ ವೇಳೆ ನಾನು ಕಛೇರಿಯ ಒಳಗೆ ಹೋಗಿ ಎ.ಇ.ಇ ಸಜಿ ಕುಮಾರ್ ಅವರಲ್ಲಿ ಗ್ರಾಹಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ವಿನಂತಿಸಿದೆ, ಆದರೆ ಆ ವೇಳೆ ಎ.ಇ.ಇಯವರು ನೀರು ಬೇಕಾದರೆ ಕಛೇರಿಯ ಒಳಗಡೆ ಸಿಬ್ಬಂದಿಗಳು ಇರುವಲ್ಲಿ ಇದೆ ಬೇಕಾದರೆ ಅಲ್ಲಿ ಹೋಗಿ ಕುಡಿಯಿರಿ, ಹೊರಗಡೆ ನೀರು ಇಡುವ ವ್ಯವಸ್ಥೆಗಳು ನಮ್ಮಲ್ಲಿ ಇಲ್ಲ ಎಂದು ಉಢಾಪೆಯ ಉತ್ತರ ನೀಡಿದರು, ಇವರ ಮಾತಿನಿಂದ ನಾನು ಸೇರಿದಂತೆ ಹಲವಾರು ಗ್ರಾಹಕರಿಗೆ ನೋವುಂಟಾಗಿದೆ, ಇಲಾಖೆಗೆ ಬಿಲ್ ಪಾವತಿಸಲು ಬಂದು ಗಂಟೆಗಟ್ಟಲೆ ಕ್ಯೂ ನಿಲ್ಲುವ ವೇಳೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿದ್ದರೆ ಹೇಗೆ? ಯಾವುದೇ ಸರಕಾರಿ ಕಛೇರಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇದೆ, ಆದುದರಿಂದ ಕೂಡಲೇ ಕಡಬ ಮೆಸ್ಕಾಂ ಉಪ ವಿಭಾಗದ ಬಿಲ್ಲಿಂಗ್ ಕೌಂಟರ್ನ ಎದುರು ಗ್ರಾಹಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಎಂದು ಅವರು ಆಗ್ರಹಿಸಿದ್ದು ಅಲ್ಲದೆ ಈಗಾಗಲೇ ಒಂದೇ ಬಿಲ್ಲಿಂಗ್ ಕೌಂಟರ್ ಇದ್ದು ಎರಡು ಕೌಂಟರ್ ಆದರೂ ತೆರೆಯಬೇಕು ಇದರಿಂದ ಗ್ರಾಹಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿಯನ್ನು ನಿವಾರಿಸಬೇಕು. ಮೆಸ್ಕಾಂ ಗ್ರಾಹಕನಾಗಿ ಕುಡಿಯುವ ನೀರನ್ನು ಕೇಳಿದಾಗ ಮಾನವಿಯತೆಯಿಂದಲಾದರೂ ಸರಿಯಾದ ಉತ್ತರ ನೀಡದೆ ಉಢಾಪೆಯಿಂದ ವರ್ತಿಸಿದ ಎ.ಇ.ಇಯವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಅವರು ಮಂಗಳೂರು ಗ್ರಾಹಕರ ಕುಂದು ಕೊರತೆ ವಿಭಾಗಕ್ಕೆ ಮತ್ತು ಪುತ್ತೂರು ಕಾರ್ಯಪಾಲಕ ಇಂಜಿನಿಯರ್ ಅವರಿಗೆ ದೂರು ನೀಡಿದ್ದಾರೆ
ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಎ.ಇ.ಇಯವರಲ್ಲಿ ಮಾತನಾಡುತ್ತೇನೆ -ಎ.ಇ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎ.ಇ ಸತ್ಯನಾರಾಯಣ ಅವರುಕುಡಿಯುವ ನೀರು ಹೊರಗಡೆ ಇಡುವ ಬಗ್ಗೆ ಎ.ಇ.ಇಯವರಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು