Wednesday, January 22, 2025
ಸಿನಿಮಾ

ಕರಾವಳಿಯ ಯುವಕ‌ ಪೃಥ್ವಿ ಅಂಬರ್ ನಟನೆಯ ‘ ದಿಯಾ’ ಚಿತ್ರಕ್ಕೆ ಆನ್ ಲೈನ್ ನಲ್ಲಿ ಮುಗಿಬಿದ್ದ ಜನ ; ರಿ-ರಿಲೀಸ್ ಮಾಡುವಂತೆ ಪ್ರೇಕ್ಷಕರ ಮನವಿ – ಕಹಳೆ ನ್ಯೂಸ್

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ರಿಲೀಸ್ ಆದ ದಿಯಾ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕನ್ನಡ ಚಿತ್ರ ಪ್ರೇಕ್ಷಕರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಿನಿಮಾ ನೋಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಾಡಿಹೊಗಳುತ್ತಿದ್ದಾರೆ. ಚಿತ್ರಮಂದಿರಗಳ ಸಮಸ್ಯೆಯ ನಡುವೆಯೂ ಗೆದ್ದು ಬೀಗಿರುವ ದಿಯಾ ಇತ್ತೀಚಿಗೆ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆನ್ ಲೈನಲ್ಲಿ ರಿಲೀಸ್ ಆಗುತ್ತಿದ್ದಂತೆ ಪ್ರೇಕ್ಷಕರು ದಿಯಾ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಅಮೆಜಾನ್ ಪ್ರೈಂನಲ್ಲಿ ಚಿತ್ರದ ವೀಕ್ಷಣೆ ಹೆಚ್ಚಾಗಿದ್ದು, ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಚಿತ್ರತಂಡದಲ್ಲಿ ಒಂದು ಮನವಿ ಇಡುತ್ತಿದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಿ-ರಿಲೀಸ್ ಮಾಡುವಂತೆ ಮನವಿ :

ಆನ್ ಲೈನ್ ನಲ್ಲಿ ಸಿನಿಮಾ ಎಲ್ಲರಿಗೂ ತಲುಪುವುದಿಲ್ಲ ಎನ್ನುವ ಕಾರಣಕ್ಕೆ ಮತ್ತೆ ರಿ-ರಿಲೀಸ್ ಮಾಡುವಂತ್ತೆ ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದೇವೆ, ಹಾಗಾಗಿ ಚಿತ್ರಮಂದಿರಗಳಲ್ಲಿಯೆ ಸಿನಿಮಾ ನೋಡಬೇಕು ಎನ್ನುವ ಎನ್ನುವ ಆಸೆಯನ್ನು ವ್ಯಕ್ತಪಡಿಸುತ್ತಿರುತ್ತಾರೆ.

ಫೆಬ್ರವರಿಯಲ್ಲಿ ರಿಲೀಸ್ ಆದ ಸಿನಿಮಾ :

ಅಂದ್ಹಾಗೆ ದಿಯಾ ಸಿನಿಮಾ ಫೆಬ್ರವರಿ 7ಕ್ಕೆ ತೆರೆಗೆ ಬಂದಿದೆ. ಸಿನಿಮಾ ರಿಲೀಸ್ ಆದ ಸಮಯದಲ್ಲಿ ಚಿತ್ರಮಂದಿರದ ಸಮಸ್ಯೆಯಿಂದ ಸಿನಿಮಾವನ್ನು ತೆಗೆದುಹಾಕಲಾಗಿತ್ತು. ಆದರೆ ಚಿತ್ರರಂಗದ ಕೆಲವು ಗಣ್ಯರ ಬೆಂಬಲ ಮತ್ತು ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ನಂತರ ಸಿನಿಮಾಗೆ ಚಿತ್ರಮಂದಿರ ಸಂಖ್ಯೆ ಹೆಚ್ಚಾಯಿತು. ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿತ್ತು ಆದರೀಗ ಕೊರೊನಾ ವೈರಲ್ ಪರಿಣಾಮ ಸಿನಿಮಾ ಪ್ರದರ್ಶನ ರದ್ದಾಯಿತು.

ಮೆಚ್ಚುಗೆ ಪಡೆದ ಪಾತ್ರಗಳು :

ಸದ್ಯ ಆನ್ ಲೈನ್ ನಲ್ಲಿ ರಿಲೀಸ್ ಆಗಿರುವ ದಿಯಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜೊತೆಗೆ ಸಿನಿಮಾದ ಪಾತ್ರಗಳು ಪ್ರೇಕ್ಷರನ್ನು ಕಾಡುತ್ತಿವೆ. ಚಿತ್ರದಲ್ಲಿ ನಾಯಕಿಯಾಗಿ ಖುಷಿ ಕಾಣಿಸಿಕೊಂಡಿದ್ದಾರೆ. ನಾಯಕರಾಗಿ ದೀಕ್ಷಿತ್ ಮತ್ತು ಪೃಥ್ವಿ ಅಂಬರ್ ಮಿಂಚಿದ್ದಾರೆ. ಚಿತ್ರಕ್ಕೆ ಅಶೋಕ್ ಆಕ್ಷನ್ ಕಟ್ ಹೇಳಿದ್ದಾರೆ.

ಮತ್ತೆ ರಿಲೀಸ್ ಮಾಡುತ್ತಾರಾ? :

ಸದ್ಯ ಕೊರೊನಾ ವೈರಸ್ ಹವಾಳಿ ಪರಿಣಾಮ ಚಿತ್ರಮಂದಿಗಳನ್ನು ಬಂದ್ ಮಾಡಲಾಗಿದೆ. ಈ ಸಮಸ್ಯೆ ಮುಗಿದ ಬಳಿಕ ಅಭಿಮಾನಿಗಳ ಒತ್ತಾಯದಂತೆ ಈ ಸಿನಿಮಾವನ್ನು ರಿ-ರಿಲೀಸ್ ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕು.