Recent Posts

Tuesday, November 26, 2024
ಸುದ್ದಿ

ಜನಗಣತಿ/ ಮನೆಗಣತಿ ವೇಳೆ ಸಮರ್ಪಕ ಮಾಹಿತಿ ನೀಡದಿದ್ದವರ ವಿರುದ್ಧ ಕಾನೂನು ಕ್ರಮ – ವೃತ್ತನಿರೀಕ್ಷಕ ತಿಮ್ಮಪ್ಪ ನಾಯ್ಕ್ ಎಚ್ಚರಿಕೆ – ಕಹಳೆ ನ್ಯೂಸ್

ಪುತ್ತೂರು: ಜನಗಣತಿ/ ಮನೆಗಣತಿ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ನಡೆಯುತ್ತಿದ್ದು ಇಲಾಖೆಯಿಂದ ನೇಮಿಸಲ್ಪಟ್ಟ ವ್ಯಕ್ತಿಗಳು ಮನೆ ಮನೆ ಭೇಟಿ ನೀಡುವ ಸಂದರ್ಭ ಸಮರ್ಪಕ ಮಾಹಿತಿ ನೀಡದಿದ್ದವರ ವಿರುದ್ಧ ಜನಗಣತಿ ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಎಚ್ಚರಿಕೆ ನೀಡಿದ್ದಾರೆ.

ಪುತ್ತೂರು ನಗರ ಠಾಣಾ ವ್ಯಾಪ್ತಿಗೆ ಬರುವ ಗ್ರಾ.ಪಂ ಅಧಿಕಾರಿಗಳು ಮತ್ತು ನಗರಸಭೆ ಸದಸ್ಯರನ್ನೊಳಗೊಂಡು ಮಾ.18ರಂದು ನಗರ ಠಾಣೆಯಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿ ಸಮಸ್ಯೆಗಳಿದ್ದಲ್ಲಿ ತಿಳಿಸಿ ನಾವು ಸಹಕಾರ ನೀಡಲಿದ್ದೇವೆ ಎಂದು ತಿಳಿಸಿದರು. ಜನಗಣತಿ/ ಜನಗಣತಿಯ ಅಂಗವಾಗಿ ನಡೆಯುವ ಮನೆ ಗಣತಿಯ ವಿಶೇಷತೆ, ಅವಶ್ಯತಕೆ ಮತ್ತು ಅದರ ಅಗತ್ಯತೆಗಳ ಬಗ್ಗೆ ಸಾರ್ವಜನಿಕರು ಸರಿಯಾದ ಮಾಹಿತಿ ಪಡೆದು ಕೊಂಡಿರಬೇಕು. ಮನೆಗೆ ಅಧಿಕಾರಿಗಳು ಬಂದಾಗ ಅವರಿಗೆ ಜನಗಣತಿಯ ಕುರಿತು ಸರಿಯಾದ ಮಾಹಿತಿ ನೀಡಬೇಕೆಂದು ಎಂದು ನಗರಸಭೆ ವಾರ್ಡ್ ಸದಸ್ಯರು ತಮ್ಮ ತಮ್ಮ ವಾರ್ಡ್‌ನಲ್ಲಿ ಸಾರ್ವಜನಿಕರಿಗೆ ಮನದಟ್ಟು ಮಾಡಿಬೇಕೆಂದು ವಿನಂತಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ನಗರಸಭಾ ಸದಸ್ಯರಾದ ಭಾಮಿ ಅಶೋಕ್ ಶೆಣೈ, ರೋಹಿಣಿ, ವಸಂತ ಕಾರೆಕ್ಕಾಡು, ರೋಬಿನ್ ತಾವ್ರೊ, ಮಮತಾ ರಂಜನ್, ವಿದ್ಯಾ ಆರ್ ಗೌರಿ, ಶಿವರಾಮ ಸಪಲ್ಯ, ಪ್ರೇಮ್ ಕುಮಾರ್, ಬಾಲಚಂದ್ರ, ಯೂಸುಫ್, ಚಿಕ್ಕಮುಡ್ನೂರು ವಿ ಎ ಶರಣ್ಯ, ನರಿಮೊಗರು ವಿ ಎ ನವಿತಾ ಡಿ, ಕುಡಿಪ್ಪಾಡಿ ಪಿಡಿಒ ಹೊನ್ನಮ್ಮ, ಕೆಮ್ಮಿಂಜೆ ವಿಎ, ಕೊಡಿಪ್ಪಾಡಿ ವಿಎ, ಗೋಪಿಲಾಲ್, ರವಿಚಂದ್ರ, ಚಿಕ್ಕಮುಡ್ನೂರು ಪಿಡಿಒ ಚಿತ್ರವಾತಿ, ಬನ್ನೂರು ಪಿಡಿಒ ಶಾರದಾ, ಕೆದಿಲ ವಿಎ ಹೊನ್ನಪ್ಪ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ಎಸ್.ಐ ಜಂಬುರಾಜ್ ಮಹರಾಜ್, ಎ.ಎಸ್.ಐ ದುಗ್ಗಪ್ಪ ಗೌಡ, ಹೆಡ್‌ಕಾನ್‌ಸ್ಟೇಬಲ್ ವಿನೋದ್, ಕೃಷ್ಣಪ್ಪ ಉಪಸ್ಥಿತರಿದ್ದರು. ಕಾನ್‌ಸ್ಟೇಬಲ್ ಧನ್ಯ ಕಾರ್ಯಕ್ರಮ ನಿರೂಪಿಸಿದರು.