Wednesday, January 22, 2025
ಸುದ್ದಿ

ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆಗೆ ಸಿದ್ಧತೆ ಬ್ರಹ್ಮರಥ ಮಂದಿರದಿಂದ ಬ್ರಹ್ಮರಥ ರಥಬೀದಿಗೆ – ಕಹಳೆ ನ್ಯೂಸ್

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಮಾ.18ರಂದು ಶ್ರೀ ದೇವರ ಬ್ರಹ್ಮರಥವನ್ನು ರಥ ಮಂದಿರದಿಂದ ದೇವಳದ ರಥಬೀದಿಗೆ ತಂದು ನಿಲ್ಲಿಸಲಾಯಿತು.

ನಗರಸಭಾ ಸದಸ್ಯರಾದ ದೇವಸ್ಥಾನದ ವಾಸ್ತು ಇಂಜಿನಿಯರ್ ಪಿ.ಜಿ. ಜಗನ್ನಿವಾಸ್‌ರಾವ್, ಸಿವಿಲ್ ಇಂಜಿನಿಯರ್ ರಾಮಚಂದ್ರ ಘಾಟೆ ಮಾರ್ಗದರ್ಶನದಲ್ಲಿ ದೇವಳದ ನೌಕರರು ಮತ್ತು ನಿತ್ಯ ಕರಸೇವಕರ ಸಹಕಾರದೊಂದಿಗೆ ಕ್ರೇನ್ ಮೂಲಕ ಹೊರಗೆ ಎಳೆದು ತರಲಾಯಿತು. ಬ್ರಹ್ಮರಥವನ್ನು ಹೊರಗೆ ತರುವ ಮುನ್ನ ಬೆಳಿಗ್ಗೆ ದೇವಳದ ಪ್ರಧಾನ ಅರ್ಚಕ ಎ ವಸಂತ ಕುಮಾರ್ ಕೆದಿಲಾಯ ಅವರು ಬ್ರಹ್ಮರಥದ ಎದುರು ಪ್ರಾರ್ಥನೆ ಮಾಡಿದ ಬಳಿಕ ರಥ ಎಳೆಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಬ್ರಹ್ಮರಥವನ್ನು ಹೊರಗೆ ಎಳೆಯುವ ಮತ್ತು ರಥಬೀದಿಯಲ್ಲಿ ತಂದು ನಿಲ್ಲಿಸುವ ಸೇವಾ ಕಾರ್ಯದ ಸಂದರ್ಭದಲ್ಲಿ ಶ್ರೀ ದೇವಸ್ಥಾನದ ಆಡಳಿತಾಧಿಕಾರಿ ಸಿ. ಲೋಕೇಶ್, ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ ಶೆಟ್ಟಿ, ನಗರಸಭಾ ಮಾಜಿ ಸದಸ್ಯ ರಾಜೇಶ್ ಬನ್ನೂರು, ನಿತ್ಯ ಕರಸೇವಕರಾದ ಗಣೇಶ್ ಆಚಾರ್ಯ, ಹರೀಶ್ ಪೈ, ಕಿರಣ್ ಶಂಕರ ಮಲ್ಯ, ದೇವಸ್ಥಾನದ ಸಿಬಂದಿ ಪದ್ಮನಾಭ, ವಿಶ್ವನಾಥ, ವಸಂತ ಹಾಗೂ ಕೆಲಸಗಾರರು ಜೊತೆಗಿದ್ದರು. ಇದೀಗ ಪುತ್ತೂರು ಸೀಮೆಯ ಜನರಲ್ಲಿ ಶ್ರೀ ದೇವರ ವಾರ್ಷಿಕ ಜಾತ್ರೆಯ ಕುರಿತು ಸಂತಸ ಮನೆ ಮಾಡಿದೆ. ಬ್ರಹ್ಮರಥವನ್ನು ರಥಬೀದಿಯಲ್ಲಿ ನೋಡಿದಾಗ ಸಹಜವಾಗಿ ಭಕ್ತರಿಗೆ ಪುತ್ತೂರು ಜಾತ್ರೆಯ ನೆನಪಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಲ್ವಪತ್ರೆ ಭೂಸ್ಪರ್ಶದ ಮೂಲಕ ರಥ ನಿಲ್ಲಿಸುವ ಶುಭ ಸೂಚನೆ :

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ರಹ್ಮರಥ ಎಳೆಯುವ ಮುನ್ನ ಬೆಳಿಗ್ಗೆ ಪ್ರಧಾನ ಅರ್ಚಕ ವೇ.ಮೂ. ವಸಂತ ಕೆದಿಲಾಯ ಪ್ರಾರ್ಥನೆ ನಡೆಸಿ ಶ್ರೀ ದೇವರ ಗಂಧ ಪ್ರಸಾದ ಹಾಗೂ ಬಿಲ್ವಪತ್ರೆಗಳನ್ನು ರಥದ ಮೇಲೆ ಇರಿಸಿದ್ದರು. ಬ್ರಹ್ಮರಥವನ್ನು ರಥಮಂದಿರದಿಂದ ಹೊರಗೆ ಎಳೆದು ರಥಬೀದಿಯಲ್ಲಿ ನಾಗನಗುಡಿಯ ಮುಗುಳಿಗೆ ನೇರಕ್ಕೆ ಬರುವ ವೇಳೆ ಬಿಲ್ವಪತ್ರೆ ಭೂಸ್ಪರ್ಶ ಮಾಡುವ ಮೂಲಕ ರಥವನ್ನು ನಿಲ್ಲಿಸುವ ಶುಭ ಸೂಚನೆ ಸಿಕ್ಕಿದೆ. ಪ್ರತಿ ವರ್ಷ ನಾಗಸನ್ನಿಧಿಯ ಮುಗುಳಿಗೆ ನೇರವಾಗಿ ಬ್ರಹ್ಮರಥವನ್ನು ನಿಲ್ಲಿಸುವ ಪದ್ಧತಿ. ಅದೇ ರೀತಿ ರಥದ ದಡೆಯ ಮೇಲೆ ಇರಿಸಲಾದ ಶ್ರೀ ದೇವರ ಪ್ರಸಾದವು ಭೂಸ್ಪರ್ಶ ನಡೆಸುವ ಮೂಲಕ ಶುಭ ಸಂಕೇತ ಸಿಕ್ಕಿದೆ.