Thursday, January 23, 2025
ಸುದ್ದಿ

ಕೊರೊನಾ ಎಫೆಕ್ಟ್ : ಮಾ. 22 ರಿಂದ ಅಂತರಾಷ್ಟ್ರೀಯ ವಿಮಾನಗಳ ಹಾರಾಟ , ಲ್ಯಾಂಡಿಂಗ್ ಬಂದ್ – ಕೇಂದ್ರದ ಮಹತ್ವದ ಆದೇಶ – ಕಹಳೆ ನ್ಯೂಸ್

ನವದೆಹಲಿ, ಮಾ 19 : ಕೊರೊನಾ ನಿಯಂತ್ರಣಕ್ಕೆ ಭಾರತವು ಸರ್ಕಾರವೂ ಮತ್ತಷ್ಟು ಬಿಗಿ ನಿಯಮಗಳನ್ನು ಜಾರಿಗೊಳಿಸಿದ್ದು, ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ತಾತ್ಕಲಿಕವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ವಿದೇಶದಿಂದ ಭಾರತಕ್ಕೆ ಅಥವಾ ಭಾರತದಿಂದ ವಿದೇಶಕ್ಕೆ ವಿಮಾನಗಳ ಹಾರಾಟವನ್ನು ನಿಷೇಧಿಸಿದೆ.

ಮಾರ್ಚ್ 22 ರಿಂದ ಮಾರ್ಚ್ 29ರವರೆಗೆ ಈ ನಿಯಮ ಜಾರಿಯಲ್ಲಿರಲಿದ್ದು, ಕೊರೊನಾ ಭೀತಿ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ವಿಮಾನಗಳ ಲ್ಯಾಂಡಿಂಗ್ ನ್ನು ಬಂದ್ ಮಾಡಲಾಗಿದೆ. ಭಾರತವೂ ಕೊರೊನಾದ ಮುಂದಿನ ಹಾಟ್ ಸ್ಪಾಟ್ ಆಗುವ ಎಚ್ಚರಿಕೆಯನ್ನು ತಜ್ಞರು ನೀಡಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು