Thursday, January 23, 2025
ಸುದ್ದಿ

ಕೊರೊನಾ ಎಫೆಕ್ಟ್ : ನಾಳೆಯಿಂದ ಮಂಗಳೂರು / ಪುತ್ತೂರು & ಬಂಟ್ವಾಳದಲ್ಲಿ RTO ಕಛೇರಿಯಲ್ಲಿ ಸೇವೆಗಳು ಅಲಭ್ಯ ; ಪ್ರಕಟಣೆ ಹೊರಡಿಸಿದ ದಕ್ಷಿಣ ಕನ್ನಡ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ. ಗಂಗಾಧರ – ಕಹಳೆ ನ್ಯೂಸ್

ಮಂಗಳೂರು : ಕೋವಿಡ್-19 (ಕರೋನ ವೈರಾಣು 2019ಯ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಿ ಮತ್ತು ಸಾರ್ವಜನಿಕ ಕಛೇರಿಗಳಲ್ಲಿ ಸಾರ್ವಜನಿಕ ಕಛೇರಿಗಳಲ್ಲಿ ಸಾರ್ವಜನಿಕರ ಹಾಜರಾತಿಯನ್ನು ಕಡಿಮೆಗೊಳಿಸುವ ಉದ್ದೇಶದಿಂದ (ಚಾಲನಾ ಅನುಜ್ಞಾ ಪತ್ರದ ವಿಭಾಗ), ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಕೆಲವು ಸೇವೆಗಳನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಲಾಗಿದೆ ಎಂದು ದಕ್ಷಿಣ ಕನ್ನಡ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ. ಗಂಗಾಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು (ನಡಾವಳಿ) ಹಾಗೂ ಮಾನ್ಯ ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ, ಬೆಂಗಳೂರು (ಸುತ್ತೋಲೆ) ದಿನಾಂಕ 19/03/2020ರಂದು ಸಾರ್ವಜನಿಕರಿಗೆ ಹೊರಡಿಸಿದ ಸುತ್ತೋಲೆ ಏನೆಂದರೆ‌, ಸರಕಾರದ ವಿವಿಧ ಸೇವೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಕಛೇರಿಗಳಿಗೆ ಭೇಟಿ ನೀಡುವುದು ಹಾಗೂ ಏಕ ಕಾಲದಲ್ಲಿ ಒಟ್ಟಿಗೆ ಸೇರುವಂತಹ ಸಂದರ್ಭ ಉಂಟಾಗಿ ವೈರಾಣು ಹರಡಲು ಅನುಕೂಲ ವಾತಾವರಣ ಮಾಡಿಕೊಟ್ಟಂತಾಗಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಹಾಗೂ ವೈರಾಣು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಪ್ರಾದೇಶಿಕ ಸಾರಿಗೆ ಕಛೇರಿ ಮಂಗಳೂರು/ ಪುತ್ತೂರು ಹಾಗೂ ಬಂಟ್ವಾಳ ಕಛೇರಿಗಳಲ್ಲಿ ಈ ಕೆಳಕಂಡಂತೆ ದೈನಂದಿನ ಕೆಲಸ ಕಾರ್ಯಗಳನ್ನು ಮೊಟಕುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

1) ವಾಹನ ಚಾಲನಾ ಕಲಿಕಾ ಅನುಜ್ಞಾ ಪತ್ರ ನೀಡಿಕೆ :- ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
2) ವಾಹನ ಚಾಲನಾ ಕಾಯಂ ಅನುಜ್ಞಾ ಪತ್ರ ನೀಡಿಕೆ :- (a) ದಿನಾಂಕ 15/04/2020ರ ವರೆಗೆ ಸಿಂಧುತ್ವ ಹೊಂದಲಿರುವ ಕಲಿಕಾ ಚಾಲನಾ ಅನುಜ್ಞಾ ಪತ್ರಗಳ ಅಭ್ಯರ್ಥಿಗಳು ಮಾತ್ರ ಕಾಯಂ ಚಾಲನಾ ಅನುಜ್ಞಾ ಪತ್ರಗಳಿಗೆ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗಿದೆ.
( b) ದಿನಾಂಕ 20/03/2020ರಿಂದ ಮುಂದಿನ ಆದೇಶದ ವರೆಗೆ ಯಾವುದೇ ಕಲಿಕಾ ಚಾಲನಾ ಅನುಜ್ಞಾ ಪತ್ರ ಮತ್ತು ಕಾಯಂ ಚಾಲನಾ ಅನುಜ್ಞಾ ಪತ್ರಗಳಿಗಾಗಿ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳನ್ನು ನಿರ್ಬಂಧಿಸಲಾಗಿದೆ.
3) ವಾಹನ ಚಾಲನಾ ಅನುಜ್ಞಾ ಪತ್ರದ ನವೀಕರಣ :- ನಿರ್ಬಂಧವು ಅನ್ವಯಿಸುದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು