Thursday, January 23, 2025
ಸುದ್ದಿ

ನಿರ್ಭಯ ಹಂತಕರನ್ನು ಗಲ್ಲಿಗೇರಿಸಿದ ಹ್ಯಾಂಗ್‍ಮ್ಯಾನ್‍ಗೆ 1 ಲಕ್ಷ ನೀಡಿ ಜಗ್ಗೇಶ್..!-ಕಹಳೆ ನ್ಯೂಸ್

ಬೆಂಗಳೂರು,ಮಾ.20- ನಿರ್ಭಯಾ ಅತ್ಯಾಚಾರ ಮಾಡಿದ ಪಾಪಿಗಳನ್ನು ನೇಣು ಹಾಕಿದ ವಧಾದಾರ(ಹ್ಯಾಂಗ್‍ಮನ್)ನಿಗೆ ಚಿತ್ರನಟ ಜಗ್ಗೇಶ್ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ. ನಿರ್ಭಯ ಅತ್ಯಾಚಾರಿಗಳಾದ ಮುಕೇಶ್‍ಸಿಂಗ್, ಪವನ್ ಗುಪ್ತಾ, ವಿನಯ್‍ಕುಮಾರ್ ಶರ್ಮಾ, ಅಕ್ಷಯ್ ಕುಮಾರ್‍ನನ್ನು ಗಲ್ಲಿಗೇರಿಸಿದ ಹ್ಯಾಂಗ್‍ಮನ್‍ಗೆ ಒಂದು ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದ್ದರು.


ಅದರಂತೆ ಇಂದು ದೇಣಿಗೆ ನೀಡಿರುವ ಬಗ್ಗೆ ಟ್ವಿಟರ್‍ನಲ್ಲಿ ಜಗ್ಗೇಶ್ ಪ್ರಕಟಿಸಿದ್ದಾರೆ. ನಿರ್ಭಯಾ ಹಂತಕರ ಹ್ಯಾಂಗ್‍ಮನ್‍ಗೆ ನನ್ನ ದೇಣಿಗೆ ದೇವನೊಬ್ಬನಿರುವ, ಅವ ಎಲ್ಲ ನೋಡುತ್ತಿರುವ ಸತ್ಯದ ಹಾದಿಯಲ್ಲಿ ನಡೆದವನಿಗೆ ಭಯವಿಲ್ಲ. ಅಸತ್ಯದ ಮಾರ್ಗಕ್ಕೆ ಶಿಕ್ಷೆ ತಪ್ಪೋಲ್ಲ. ಈ ದಿನಕ್ಕೆ ಹಲ್ಲುಕಚ್ಚಿ ಎಂದು ಅಂತ್ಯ ದುಷ್ಟಕ್ರಿಮಿಗಳಿಗೆ ಎಂದು ಕಾಯುತ್ತಿದ್ದೆ. ಸುದ್ದಿ ಕೇಳಲು ನಿದ್ದೆ ಮಾಡದೆ ಕಾದೆ ಎಂದು ಟ್ವೀಟರ್‍ನಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

 

https://twitter.com/Jaggesh2/status/1240816506440581120/photo/1