Friday, January 24, 2025
ಸುದ್ದಿ

ಇಚಿಲಂಪಾಡಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಹಿಂ.ಜಾ.ವೇ ಮುಖಂಡ ಹಾಗೂ ಆತನ ಸ್ನೇಹಿತ ನೀರು ಪಾಲು – ಕಹಳೆ ನ್ಯೂಸ್

ಕಡಬ : ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕೆಂದು ತೆರಳಿದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಕಣ್ಮರೆಯಾಗಿರುವ ಘಟನೆ ಮಾ.20 ರಂದು ಸಂಜೆ ಇಚಿಲಂಪಾಡಿಯಲ್ಲಿ ನಡೆದಿದೆ.

ನೀರು ಪಾಲಾದ ಯುವಕರನ್ನು ಕೊರಮೇರು ನಿವಾಸಿಗಳಾದ ವೆಂಕಟೇಶ ಹಾಗೂ ಗುರುನಂದನ್ ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವೆಂಕಟೇಶ ಅವರು ಪುತ್ತೂರು ನಗರ ಹಿಂದೂ ಜಾಗರಣಾ ವೇದಿಕೆಯ ಜೊತೆ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾ.20ರ ಸಂಜೆ ಇಚಿಲಂಪಾಡಿ ಸಮೀಪದ ಕೊರಮೇರು ಬದನೆಗುಂಡಿ ಎಂಬಲ್ಲಿ ಸ್ನಾನಕ್ಕೆಂದು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಓರ್ವನ ಮೃತದೇಹ ಪತ್ತೆಯಾಗಿದ್ದು, ಮತ್ತೋರ್ವನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.