Friday, January 24, 2025
ಸುದ್ದಿ

ಕಾಸರಗೋಡಿನಲ್ಲಿ 6 ಕೊರೊನಾ ಪ್ರಕರಣಗಳು ದೃಢ ; ಇಂದು ಮಧ್ಯಾಹ್ನ 2.00 ರಿಂದ ಮಾ. 31ರ ಮಧ್ಯರಾತ್ರಿವರೆಗೆ ಕರ್ನಾಟಕ – ಕಾಸರಗೋಡು ವಾಹನ ಸಂಚಾರ ಬಂದ್ | ಸಿಂಧೂ ರೂಪೇಶ್ ಆದೇಶ – ಕಹಳೆ ನ್ಯೂಸ್

ಮಂಗಳೂರು : ಇಂದು ಮಧ್ಯಾಹ್ನ 2 ಗಂಟೆಯಿಂದ ಮಾರ್ಚ್ 31 ರ ಮಧ್ಯರಾತ್ರಿ 12 ರ ವರೆಗೆ ಕೇರಳ ಮತ್ತು ಕರ್ನಾಟಕವನ್ನು ಕಾಸರಗೋಡಿನ ಮೂಲಕ ಜೋಡಿಸುವ ರಸ್ತೆಯನ್ನು ವಾಹನಗಳಿಗೆ ಬಂದ್ ಮಾಡುವ ನಿರ್ದಾರವನ್ನು ಸರಕಾರ ಕೈಗೊಂಡಿದೆ. ದಕ್ಷಿಣ ಕನ್ನಡ ಡಿ ಸಿ ಸಿಂಧೂ ಬಿ. ರೂಪೇಶ್ ಅವರು ಈ ಆದೇಶ ಹೊರಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಸರಗೋಡಿನಲ್ಲಿ 6 ಪ್ರಕರಣಗಳು ವರದಿಯಾಗ ಹಿನ್ನೆಲೆಯಲ್ಲಿ ಮತ್ತು ಕಾಸರಗೋಡು ಕರ್ನಾಟಕದ ಮಧ್ಯೆ ಜಾಸ್ತಿ ಟ್ರಾಫಿಕ್ ಓಡಾಡುವ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ಈಗಾಗಲೇ 15 ಪ್ರಕರಣಗಳು ರಿಪೋರ್ಟ್ ಆಗಿದ್ದು, ಒಟ್ಟು 2 ಸಾವು ಕರ್ನಾಟಕದಿಂದ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತುರ್ತು ಸಂದರ್ಭಗಳಲ್ಲಿ ತಲಪಾಡಿ ಚೆಕ್ ಪೋಸ್ಟ್ ಮೂಲಕ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.