Sunday, November 24, 2024
ಸುದ್ದಿ

” ಜನತಾ ಕರ್ಫ್ಯೂ ” – ದಕ್ಷಿಣ ಕನ್ನಡ ಸ್ಥಬ್ದ ; ಸಂಪೂರ್ಣ ಬೆಂಬಲ – ರಸ್ತೆಗಿಳಿಯದ ಜನರು – ಕಹಳೆ ನ್ಯೂಸ್

ಮಂಗಳೂರು, ಮಾ.22 : ಕೊರೊನಾ ಸೋಂಕು ಹಬ್ಬುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಜನತಾ ಕರ್ಫ್ಯೂಗೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ ಭಾರೀ ಬೆಂಬಲ ದೊರೆತಿದೆ.

ಎಂದಿಗೂ ಜನರ ಓಡಾಟದಿಂದ ಕೂಡಿರುವ ಮಂಗಳೂರು ಇಂದು ಮುಂಜಾನೆಯೇ ಮೌನದಿಂದ ಕೂಡಿದೆ. ಭಾನುವಾರ ಮನೆಯಲ್ಲೇ ಉಳಿದುಕೊಳ್ಳಲು ತೀರ್ಮಾನ ಮಾಡಿರುವ ನಾಗರಿಕರು ಶನಿವಾರವೇ ಪೇಟೆಗೆ ತೆರಳಿ ಬೇಕಾಗಿರುವ ಅಗತ್ಯ ವಸ್ತುಗಳ ಖರೀದಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಲ್ಲಾ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣವಾಗಿ ಬಂದ್‌ ಆಗಿದ್ದು ಕೇವಲ ಬೆರಳಿಣಿಕೆಯ ಬೈಕ್‌ಗಳನ್ನು ಹೊರತುಪಡಿಸಿ ಬೇರಾವ ವಾಹನಗಳು ರಸ್ತೆಗೆ ಇಳಿದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ದೇವಾಲಯ, ಮಸೀದಿ, ಚರ್ಚ್‌ಗಳು ಕೂಡಾ ಮುಚ್ಚಲಾಗಿದೆ. ಪ್ರತಿ ಭಾನುವಾರ ಚರ್ಚ್‌ನಲ್ಲಿ ನಡೆಯುತ್ತಿದ್ದ ಪ್ರಾರ್ಥನೆಯನ್ನು ರದ್ದು ಮಾಡಲಾಗಿದ್ದು ಮನೆಯಲ್ಲಿಯೇ ಪ್ರಾರ್ಥನೆ ಮಾಡುವಂತೆ ಹೇಳಲಾಗಿದೆ.

ಇನ್ನೂ ಸರಕು ಸಾಗಾಟದ ವಾಹನಗಳು ಕೂಡಾ ಸಂಚಾರ ಸ್ಥಗಿತಗೊಂಡಿದ್ದು ಕೆಲವು ಲಾರಿಗಳು ಪಣಂಬೂರು, ಕೂಳೂರು ಪ್ರದೇಶದಲ್ಲಿ ನಿಲ್ಲಿಸಲಾಗಿದೆ. ಹಾಗೆಯೇ ರೈಲು ನಿಲ್ದಾಣ ಕೂಡಾ ಸ್ಥಬ್ಧವಾಗಿದೆ.

ಹಾಲು ಪೇಪರ್ ಮಾರಾಟ ಯಾಥಾಸ್ಥಿತಿಯಲ್ಲಿದ್ದು ಜನರು 7 ಗಂಟೆಗೂ ಮುನ್ನವೇ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದು ಮುಂಜಾನೆ ನಾಲ್ಕು ಗಂಟೆಗೇ ಹಾಲು ಪೇಪರ್ ಮಾರಾಟ ಆರಂಭಗೊಂಡಿದೆ. ಆಂಬುಲೆನ್ಸ್‌ ಕೂಡಾ ಸಂಚಾರ ಮಾಡುತ್ತಿದೆ.