Tuesday, January 28, 2025
ಸುದ್ದಿ

ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹಿನ್ನಲೆ ; ಲಾಕ್ ಡೌನ್ ಏನುಂಟು? ಏನಿಲ್ಲ? : ಇಲ್ಲಿದೆ ಮಾಹಿತಿ – ಕಹಳೆ ನ್ಯೂಸ್

ಮಂಗಳೂರು : ಕೇಂದ್ರ ಸರಕಾರ ಘೋಷಿಸಿದ ಲಾಕ್ ಡೌನ್ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡವೂ ಸೇರಿದೆ.‌ ಈ ಹಿನ್ನೆಲೆಯಲ್ಲಿ ಮಾ.31 ರವರೆಗೆ 144 ನಿಷೇಧಾಜ್ಞೆಯನ್ನೂ ಘೋಷಿಸಲಾಗಿದೆ.

ಜಿಲ್ಲಾಧಿಕಾರಿ ಸಿಂಧೂ ವಿ.‌ರೂಪೇಶ್ ಅವರ ಆದೇಶದ ಭಾಗ ಇಂತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯಾವುದು ಇದೆ..? : 

* ಆಹಾರ, ಪಡಿತರ ಅಂಗಡಿ, ಹಾಲು, ತರಕಾರಿ, ದಿನಸಿ, ಮಾಂಸ, ಮೀನು, ಹಣ್ಣಿನ ಮಾರುಕಟ್ಟೆ ಮತ್ತು ಅಂಗಡಿಗಳು.
* ಎಲ್ಲ ಸರಕು ಸಾಗಾಟ.
* ಪೊಲೀಸ್, ಅಗ್ನಿಶಾಮಕ ಸೇವೆ.
* ಎಲ್ಲ ಸರಕಾರಿ ಕಚೇರಿಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‍ರಾಜ್ ಸಂಸ್ಥೆಗಳ ಕಚೇರಿಗಳು, ಅಂಚೆ ಸೇವೆಗಳು.
* ವಿದ್ಯುಚ್ಛಕ್ತಿ, ನೀರು ಮತ್ತು ಪೌರ ಸೇವೆಗಳು.
* ಬ್ಯಾಂಕ್/ ಎಟಿಎಂ ದೂರವಾಣಿ, ಇಂಟರ್‍ನೆಟ್.
* ಆಹಾರ ಪದಾರ್ಥಗಳ ಹೋಮ್ ಡೆಲಿವರಿ, ಔಷಧ, ವೈದ್ಯಕೀಯ ಸಲಕರಣೆಗಳು.
* ರೆಸ್ಟೋರೆಂಟ್‍ಗಳು ಆಹಾರ ಕೊಂಡೊಯ್ಯುವುದು.
* ಕೃಷಿ, ರೇಷ್ಮೆ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆಗೆ ಸಂಬಂಸಿದ ಅಂಗಡಿ ಮತ್ತು ಮಾರುಕಟ್ಟೆಗಳು.
* ಸರಕಾರಿ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಒದಗಿಸಲಾಗುವ ಕ್ಯಾಂಟೀನ್ ಸೇವೆಗಳು.

ಯಾವುದು ಇಲ್ಲ? 

* ಸಾರ್ವಜನಿಕರು ತುರ್ತು ಮತ್ತು ಅವಶ್ಯಕ ಕಾರ್ಯಗಳನ್ನು ಹೊರತುಪಡಿಸಿ, ಇನ್ಯಾವುದೇ ಕಾರಣಗಳಿಗೆ ವಸತಿ ಸಮುಚ್ಚಯದಿಂದ ಹೊರಗೆ ಬರುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
* ಸಾರ್ವಜನಿಕರು ತಮ್ಮ ಮನೆಯಲ್ಲಿಯೂ ಜನ ಸೇರುವಂಥ ಯಾವುದೇ ಕಾರ್ಯಕ್ರಮ ಮಾಡುವುದನ್ನು ನಿರ್ಬಂಧಿಸಿದೆ.
* ಸಾಮಾಜಿಕ ಅಂತರ ಪಾಲಿಸುವ ದೃಷ್ಟಿಯಿಂದ ಜನಜಂಗುಳಿ ಸೇರದಂತೆ ಎಲ್ಲ ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ, ಎಲ್ಲ ಧಾರ್ಮಿಕ ಸಂಸ್ಥೆಗಳ ಉತ್ಸವ/ ಜಾತ್ರೆಗಳನ್ನು ನಿಷೇಧಿಸಿದೆ.
* ಎಲ್ಲ ಅಂಗಡಿಗಳು, ವಾಣಿಜ್ಯ ಸಂಕೀರ್ಣಗಳು, ವರ್ಕ್ ಶಾಪ್‍ಗಳು, ಅವಶ್ಯಕವಲ್ಲದ ಸೇವೆಗಳನ್ನು ನಿರ್ವಹಿಸುವ ಗೋದಾಮುಗಳನ್ನು ಮುಚ್ಚುವುದು.
* ಕಾರ್ಮಿಕರ ಆಧಾರದಲ್ಲಿ ಕಾರ್ಯನಿರ್ವಹಿಸುವ ಕೈಗಾರಿಕೆಗಳು ಶೇ.50ರಷ್ಟು ಬಲದಲ್ಲಿ ರೊಟೇಶನ್ ಆಧಾರದಲ್ಲಿ ಕೆಲಸ ನಿರ್ವಹಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಎಲ್ಲ ಕ್ರಮಗಳನ್ನು ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಬೇಕು.
* ಎಲ್ಲ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಘಟಕಗಳ ಪೈಕಿ, ತುರ್ತು ಮತ್ತು ಅಗತ್ಯ ಸೇವೆಗಳನ್ನು ನಿರ್ವಹಿಸುವ ಸಿಬ್ಬಂದಿಗಳನ್ನು ಹೊರತುಪಡಿಸಿ, ಉಳಿದ ಘಟಕಗಳು ಮತ್ತು ಸಿಬ್ಬಂದಿಗಳು ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಖಚಿತಪಡಿಸಬೇಕು.
* ರಸ್ತೆ ಸಾರಿಗೆ ನಿಗಮ ಮತ್ತು ಖಾಸಗಿ ಸಾರಿಗೆ ಸಂಸ್ಥೆಯ ಬಸ್ ಸಂಚಾರವನ್ನು ಸ್ಥಗಿತಗೊಳಿಸುವುದು.
*ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಂತಾರಾಜ್ಯ ಹಾಗೂ ಅಂತರ್‌ ಜಿಲ್ಲೆ ಸಾರಿಗೆ ಸಂಚಾರ ಸೇವೆಗಳು ಕಾರ್ಯಾಚರಿಸುವಂತಿಲ್ಲ.
* ದೇವಸ್ಥಾನ, ಮಸೀದಿ, ಚರ್ಚ್ ಒಳಗೊಂಡಂತೆ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಗುಂಪು ಗುಂಪಾಗಿ ಸಾರ್ವಜನಿಕರು ಪ್ರವೇಶಿಸಬಾರದು.
* ಬೇಸಿಗೆ ಶಿಬಿರ, ಸಮಾರಂಭಗಳು, ವಿಚಾರ ಸಂಕಿರಣಗಳು, ವಸ್ತುಪ್ರದರ್ಶನಗಳು, ಸಂಗೀತ ಹಬ್ಬಗಳು, ಕ್ರೀಡಾ ಚಟುವಟಿಕೆ, ಪಂದ್ಯಾಟಗಳು ಮತ್ತಿತರ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಆದೇಶಿಸಿದೆ.
* ಬೀಚ್‍ಗಳು, ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಿದೆ.
* ಈ ಆದೇಶಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು.
* ವೈಯಕ್ತಿಕ ಕಾರಣಗಳಿಗಾಗಿ ಅನುಮತಿ ಕೋರಿ ಮನವಿ ಸಲ್ಲಿಸಲು ಯಾವುದೇ ಕಾರಣಕ್ಕೂ ಅವಕಾಶ ಇರುವುದಿಲ್ಲ.