Saturday, November 23, 2024
ಸುದ್ದಿ

ಅಖಿಲ ಭಾರತ ಮಟ್ಟದ ಕೆವಿಪಿವೈ ಪರೀಕ್ಷೆ ; ಮಹಾಲಿಂಗ ಗೌತಮ್ ಉಪಾಧ್ಯಾಯರಿಗೆ 49ನೇ ರ‍್ಯಾಂಕ್ – ಕಹಳೆ ನ್ಯೂಸ್

ಪುತ್ತೂರು: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಡೆಸಿದ ಕಿಶೋರ್ ವೈಜ್ಞಾನಿಕ ಪ್ರೋತ್ಸಾಹನ್ ಯೋಜನೆಯ ಪರೀಕ್ಷೆಯಲ್ಲಿ ಮಹಾಲಿಂಗ ಗೌತಮ್ ಉಪಾಧ್ಯಾಯ ಜನರಲ್ ಮೆರಿಟ್ ವಿಭಾಗದಲ್ಲಿ 49ನೇ ರ‍್ಯಾಂಕ್ ಗಳಿಸಿದ್ದಾರೆ.

ಪ್ರಸ್ತುತ ಇವರು ದೇಶದ ಪ್ರತಿಷ್ಠಿತ ಸಂಸ್ಥೆ ಪೂನಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಆಂಡ್ ರಿಸರ್ಚ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಹಾಲಿಂಗ ಗೌತಮ್‌ರವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸುದಾನ ವಸತಿಯುತ ಶಾಲೆಯಲ್ಲಿ, ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮುಡಿಪು ನವೋದಯದಲ್ಲಿ ಪಡೆದಿರುತ್ತಾರೆ. ೮ನೇ ತರಗತಿಯಲ್ಲಿಯೇ ನ್ಯಾಷನಲ್ ಚಿಲ್ಡ್ರನ್ಸ್ ಸೈಯನ್ಸ್ ನಲ್ಲಿ ಭಾಗವಹಿಸಿದ್ದರು. ವೇದ ಗಣಿತದಲ್ಲಿ ವಿಶೇಷ ಪ್ರಬಂಧ ಮಂಡಿಸಿ ಪ್ರಶಂಸಗೆ ಪಾತ್ರರಾಗಿದ್ದಾರೆ. 2016ರಲ್ಲಿ ಜಪಾನ್‌ನಲ್ಲಿ ನಡೆದ ಸೈಯನ್ಸ್ ಯೂತ್ ಎಕ್ಸ್‌ಚೇಂಜ್ ಪ್ರೋಗ್ರಾಮ್‌ನಲ್ಲಿ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಪುತ್ತೂರಿನ ಜವುಳಿ ಮಳಿಗೆ ನ್ಯೂ ಆರ್.ಹೆಚ್. ಸೆಂಟರ್‌ನ ಮ್ಹಾಲಕರಾದ ಗೋಪಾಲ ಎಂ.ಯು. ಮತ್ತು ಸೌಮ್ಯ ಯಂ.ಯು.ರವರ ಪುತ್ರ. ಕಿಶೋರ್ ವೈಜ್ಞಾನಿಕ ಪ್ರೋತ್ಸಾಹನ್ ಯೋಜನೆಯ ಮೂಲ ವಿಜ್ಞಾನದಲ್ಲಿ ಓದುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯನ್ನು ಭಾರತ ಸರಕಾರ ಪ್ರಾರಂಭಿಸಿದ್ದು, ಇದರ ಕಾರ್ಯಕ್ರಮದಡಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವುದು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಮೂಲ ಶಿಕ್ಷಣದಲ್ಲಿ ಅಧ್ಯಯನ ಮುಂದುವರಿಸುವವರಿಗೆ ಅಥವಾ ಸಂಶೋಧನೆ ನಡೆಸುವವರಿಗೆ ೫ ವರ್ಷಗಳವರೆಗೆ ವಾರ್ಷಿಕ ರೂ. 1.2 ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು