ಕೊರೊನಾ ಎಫೆಕ್ಟ್ ‘ ಲಾಕ್ ಡೌನ್ ‘ : ರೋಗಿಗಳಿಗೆ ತುರ್ತು ರಕ್ತ, ಬಿಕ್ಷುಕರಿಗೆ ಊಟದ ವ್ಯವಸ್ಥೆಗೆ ವಿ.ಹಿಂ.ಪ, ಬಜರಂಗದಳ ಸಿದ್ಧತೆ – ಕಹಳೆ ನ್ಯೂಸ್
ಪುತ್ತೂರು: ಕೊರೊನಾ ವೈರಸ್ ಸೋಂಕು ಭೀತಿಯ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ದೇಶ ವ್ಯಾಪಿ ೨೧ ದಿನಗಳ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತುರ್ತು ರಕ್ತ ಮತ್ತು ಬೀದಿ ಬದಿ ಬಿಕ್ಷುಕರಿಗೆ, ಅನಾಥ ಮಕ್ಕಳಿಗೆ ಆಹಾರದ ಅವಶ್ಯತೆಗಳನ್ನು ಪೂರೈಸುವ ಉದ್ದೇಶದಿಂದ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಸಿದ್ಧತೆ ನಡೆಸಿದೆ.
ಪುತ್ತೂರು ಪೇಟೆಯಲ್ಲಿರುವ ಆಸ್ಪತ್ರಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ತುರ್ತು ರಕ್ತದ ವ್ಯವಸ್ಥೆಯಲ್ಲಿ ಅಭಾವ ಉಂಟಾದರೆ ತುರ್ತು ಸಂದರ್ಭದಲ್ಲಿ ಮತ್ತು ರಕ್ತದ ಅವಶ್ಯಕತೆ ಇರುವವರು ಬಜರಂದಳದ ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ ಮೊ: ೯೭೪೦೪೬೨೪೨೯, ವಿಶ್ವಹಿಂದೂ ಪರಿಷತ್‌ನ ಜಯಂತ್ ಕುಂಜೂರು ಪಂಜ ಮೊ: ೯೭೩೧೪೮೦೬೬೪, ಗುರುರಾಜ್ ಬಲ್ನಾಡ್ ಮೊ: ೭೩೩೭೭೫೪೯೫೬ ಅನ್ನು ಸಂಪರ್ಕಿಸಲು ಸಂಘಟಕರು ತಿಳಿಸಿದ್ದಾರೆ.
ಊಟದ ವ್ಯವಸ್ಥೆಗೆ ಸಂಪರ್ಕಿಸಿ:
ಆಹಾರ ಮತ್ತು ತುರ್ತು ಸೇವೆಗಳಲ್ಲಿ ಸಮಸ್ಯೆಗಳಾದಲ್ಲಿ ಊಟ ಉಪಹಾರ ಇಲ್ಲದೆ ರಸ್ತೆ ಬದಿಯಲ್ಲಿ ಬಿಕ್ಷೆ ಬೇಡುವವರು ಒಂದೊತ್ತಿನ ಊಟಕ್ಕೂ ಕಷ್ಟ ಇರುವವರು ಅಥವಾ ಮಕ್ಕಳು ಉಪವಾಸ ಇರುವುದು ಕಂಡು ಬಂದಲ್ಲಿ ವಿಶ್ವಹಿಂದೂ ಪರಿಷತ್‌ನ ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ ಮೊ: ೯೪೪೮೩೨೮೨೮೯, ೯೭೪೧೬೭೮೨೮೯, ಪ್ರವೀಣ್ ಕಲ್ಲೇಗ ಮೊ: 9663885236, ಮಿಥುನ್ ತೆಂಕಿಲ ಮೊ: 9008403992 ಅನ್ನು ಸಂಪರ್ಕಿಸುವಂತೆ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಜಂಟಿ ಪ್ರಕಟಣೆ ತಿಳಿಸಿದೆ.