Sunday, January 19, 2025
ಸುದ್ದಿ

ಅಕ್ಷತಾ ಕೊಲೆ ಆರೋಪಿಯನ್ನು ಗಲ್ಲಿಗೇರಿಸಿ : ಹತ್ತು ಲಕ್ಷ ಪರಿಹಾರ ನೀಡಿ – ಶರಣ್ ಪಂಪ್ವೆಲ್

ಸುಳ್ಯ: ಕಾಲೇಜು ವಿದ್ಯಾರ್ಥಿನಿ ಅಕ್ಷತಾಳ ಬರ್ಬರ ಕೊಲೆಯನ್ನು ಭಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ಕ್ರೂರವಾಗಿ ಖಂಡಿಸುತ್ತಿದ್ದು, ಪ್ರೀತಿ ಪ್ರೇಮದ ಹೆಸರಿನಲ್ಲಿ ದೌರ್ಜನ್ಯಕ್ಕೆ ಬಲಿಯಾಗಿರುವುದು ಕರಾವಳಿಯ ಹಿಂದೂ ಸಮಾಜಕ್ಕೆ ಆತಂಕ ಸೃಷ್ಟಿಯಾಗಿದೆ. ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿ ಕಾರ್ತಿಕ್‍ಗೆ ಗಲ್ಲುಶಿಕ್ಷೆ ವಿಧಿಸಬೇಕು ಮತ್ತು ಮೃತ ಅಕ್ಷತಾಳ ಕುಟುಂಬಕ್ಕೆ ರಾಜ್ಯ ಸರಕಾರ 10 ಲಕ್ಷ ರೂ ಪರಿಹಾರ ನೀಡಬೇಕು ಎಂದು ವಿ.ಹೆಚ್.ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ಆಗ್ರಹಿಸಿದ್ದಾರೆ.

ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಕರಾವಳಿಯಲ್ಲಿ ಹಿಂದೂ ಯುವತಿಯರ ಅತ್ಯಾಚಾರ, ಕೊಲೆ, ಲವ್ ಜಿಹಾದ್ ಮುಖಂತರ ವಿದ್ಯಾರ್ಥಿನಿಯರ ಮತಾಂತರ ನಡೆಯುತ್ತಿದೆ. ಡ್ರಗ್ಸ್, ಗಾಂಜಾ ಸೇವನೆಯ ಮೂಲಕ ಹಿಂದೂ ಯುವತಿಯವರ ಬಾಳನ್ನು ನಾಶ ಮಾಡುವ ವ್ಯವಸ್ಥಿತವಾದ ಷಡ್ಯಂತ್ಯ ಜಿಲ್ಲೆಯಲ್ಲಿ ನಡೆಯುತ್ತಿದೆ. ಇದೇ ರೀತಿಯಲ್ಲಿ ಅಕ್ಷತಾಳ ಕೊಲೆಯಾಗಿದೆ. ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕೊಲೆ ಮಾಡಿದ ಕಾರ್ತಿಕ್‍ಗೆ ಗಲ್ಲುಶಿಕ್ಷೆ ವಿಧಿಸುವಂತ ಕ್ರಮವನ್ನು ತೆಗೆದುಕೊಳ್ಳಬೇಕು. ಅಲ್ಲದೇ ಬಡತನದಲ್ಲಿರುವ ಮೃತ ಅಕ್ಷತಾಳ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು. ಇಂತಹ ಪ್ರಕರಣಗಳು ಆದಾಗ ಪೋಷಕರು ನಮ್ಮ ಸಂಘಟನೆ ಅಥವಾ ಪೋಲಿಸ್ ಠಾಣೆಗೆ ತಿಳಿಸುವಂತಹ ಕೆಲಸ ಮಾಡಬೇಕು. ನಮ್ಮ ಸಂಘಟನೆಯ ವತಿಯಿಂದ ನಮ್ಮ ಪೂರ್ಣ ಸಹಕಾರ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂದಿನ ದಿವಸದಲ್ಲಿ ಸಂಘಟನೆಗಳ ಮುಲಕ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡ್ರಗ್ಸ್, ಗಾಂಜಾ ಚಟುವಟಿಕೆಯ ಜಾಲ ವಿಸ್ತರಣೆ ಆಗುತ್ತಿದೆ.  ಇವತ್ತು ಸುಳ್ಯದ ಕಾಲೇಜು ಕ್ಯಾಂಪಸ್‍ಗೆ ಸುತ್ತ ಮುತ್ತ ಡ್ರಗ್ಸ್ ಮಾಫಿಯಾ ಹೆಚ್ಚಾಗುತ್ತಿದೆ. ಈ ಬಗ್ಗೆ ನಾವು ಪೋಲಿಸ್ ಕಮಿಷನರ್, ಪೋಲಿಸ್ ಅಧಿಕಾರಿಗಳಿಗೆ ಪದೇ ಪದೇ ತಿಳಿಸಿದ್ದರೂ ಇಲಾಖೆ ಅಥವಾ ಸರಕಾರ ಕ್ರಮ ಕೈಗೊಳ್ಳು ವಿಫಲವಾಗಿದೆ. ಪೋಲಿಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಇದನ್ನು ನಿಯಂತ್ರಣ ಮಾಡಲು ಅಸಾಧ್ಯ ಆದರೆ ಡ್ರಗ್ಸ್ ನ ವಿರುದ್ದ ನೇರವಾಗಿ ಹೋರಾಟ ಮಾಡುತ್ತೇವೆ. ಅದನ್ನು ನಿಲ್ಲಿಸುವಂತಹ ಕೆಲಸ ನಾವು ಮಾಡುತ್ತೇವೆ. ಡ್ರಗ್ಸ್, ಗಾಂಜಾ ಎಲ್ಲಿಂದ ಬರುತ್ತದೆ, ಯಾರು ಮಾರಾಟ ಮಾಡುತ್ತಿದ್ದಾರೆ ಎಂಬುದನ್ನು ಅದರ ಮೂಲವನ್ನು ಹುಡುಕುವ ಕೆಲಸ ಮಾಡಬೇಕು. ಆ ಕೆಲಸ ಮಾಡುವ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗ ಪಡಿಸಲು ನಮ್ಮ ಸಂಘಟನೆಯ ಕಾರ್ಯಕರ್ತರು ಸಿದ್ದರಿದ್ದೇವೆ. ಅಲ್ಲದೇ ಜಿಲ್ಲೆಯಲ್ಲಿ ನಡೆಯುವ ಅಕ್ರಮ ಗೋಸಾಗಾಟ, ಗೋಹತ್ಯೆಯನ್ನು ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ನಿಲ್ಲಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಟಿಯಲ್ಲಿ ತಾಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಗಣಪತಿ ಭಟ್ ಮಜಿಗುಂಡಿ, ಭಜರಂಗದಳ ಮುಖಂಡರಾದ ಪ್ರಕಾಶ್ ಯಾದವ್, ದುರ್ಗಾವಾಹಿನಿಯ ಅನಿತಾ, ತುಳುನಾಡ ರಕ್ಷಣಾ ವೇದಿಕೆಯ ರಂಜಿತ್, ಮಧುಸೂಧನ್ ಮೊದಲಾದವರು ಉಪಸ್ಥಿತರಿದ್ದರು.

ಪತ್ರಿಕಾಗೋಷ್ಠಿ ಮುಗಿಸಿ ಆ ಬಳಿಕ ಮುಳ್ಳೇರಿಯಾ ತೆರಳಿ ಅಕ್ಷತಾ ಮನೆಗೆ ಭೇಟಿ ನೀಡಿ  ಸುಳ್ಯ ವಿ.ಹೆಚ್.ಪಿ ಹಾಗೂ ಬಜರಂಗ ದಳ ವತಿಯಿಂದ ರೂ ಇಪ್ಪತ್ತು ಸಾವಿರ ಧನ ಸಹಾಯ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರಲ್ಲದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಾಯ ಸಹಕಾರ ನೀಡುವ ಭರವಸೆ ನೀಡಿದರು.

ವರದಿ : ಕಹಳೆ ನ್ಯೂಸ್