Saturday, November 23, 2024
ಸುದ್ದಿ

ಬೆಳ್ತಂಗಡಿಯ ಮಿನಿ ವಿಧಾನ ಸೌಧದಲ್ಲಿ ತುರ್ತು ಸೇವಾ ಕೇಂದ್ರ ; ಸಹಾಯವಾಣಿ – ಕಹಳೆ ನ್ಯೂಸ್

ಬೆಳ್ತಂಗಡಿ: ಮಿನಿ ವಿಧಾನ ಸೌಧ ಕಟ್ಟಡದಲ್ಲಿ ಕೊರೊನಾ ಬಗ್ಗೆ ತುರ್ತು ಕಾರ್ಯಪಡೆ ರಚಿಸಲಾಗಿದ್ದು ನಾಳೆಯಿಂದ ಈ ಕೇಂದ್ರಕ್ಕೆ ದೂರವಾಣಿ ಕರೆ ಮಾಡಿ ಜನ ತಮ್ಮ ಸಮಸ್ಯೆಗಳಿಗೆ ಪರಿಹಾರ ಮತ್ತು ಅಗತ್ಯ ವಸ್ತುಗಳ ಅಲಭ್ಯತೆ ಸಮಸ್ಯೆಗಳಿದ್ದರೆ ಪರಿಹಾರ ಕಂಡುಕೊಳ್ಳಬಹುದು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.

ಮಾ. ೨೫ ರಂದು ಸರಕಾರಿ ಪ್ರವಾಸಿ ಬಂಗಲೆಯಲ್ಲಿ ವೈದ್ಯಾಧಿಕಾರಿಗಳು, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ತುರ್ತು ಸಭೆ ನಡೆಸಿದ ಶಾಸಕರು ಬಳಿಕ ಮಾಧ್ಯಮ ಪ್ರತನಿಧಿಗಳಿಗೆ ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತುರ್ತು ಕರೆಗಾಗಿ ದೂರವಾಣಿ ಸಂಖ್ಯೆ: 08256-232047 ಮತ್ತು  8256232047 &
9901212207 ನಂಬರ್ (ಶಾಸಕರ ಕಚೇರಿ ನಂಬರ್) ಗೆ ತಾಲೂಕಿನ ಜನತೆ ಕರೆಮಾಡಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಎಲ್ಲ ಪಿಡಿಒ ಗಳಿಗೆ, ತಹಶಿಲ್ದಾರರ ಮೂಲಕ ಎಲ್ಲ ವಿ.ಎ ಗಳಿಗೆ ಸೂಚನೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮಿನಿವಿಧಾನ ಸೌಧದ ಈ ಕೇಂದ್ರ ಕೊರೊನಾ ತುರ್ತು ಸೇವಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

ಈ ಕೇಂದ್ರದಲ್ಲಿ ಯಾರ್‍ಯಾರಿರುತ್ತಾರೆ?
ಈ ಕೇಂದ್ರದದಲ್ಲಿ ಶಾಸಕರ ಕಚೇರಿಯಿಂದ ಒಬ್ಬರು ಸಿಬ್ಬಂದಿ, ಕಂದಾಯ ಇಲಾಖೆಯಿಂದ ಇಬ್ಬರು, ತಾಲೂಕು ಪಂಚಾಯತ್ ಕಡೆಯಿಂದ ಒಬ್ಬರು, ಆರೋಗ್ಯ ಇಲಾಖೆಯಿಂದ ಒಬ್ಬರು ಮತ್ತು ಪೊಲೀಸ್ ಇಲಾಖೆಯಿಂದ ಒಬ್ಬರು ಇರುವಂತೆ ಕ್ರಮ ಕೈಗೊಳ್ಳಲಾಗಿದೆ. ಸಹಾಯ ಯಾಚಿಸಿ ಈ ಕೇಂದ್ರಕ್ಕೆ ಕರೆಬಂದ ತಕ್ಷಣ ವಿವಿಧ ಇಲಾಖೆಗಳ ಮೂಲಕ ವ್ಯವಹರಿಸಿ ಅದನ್ನು ಪರಿಹರಿಸುವ ಕಾರ್ಯ ಮಾಡಲಿದ್ದಾರೆ ಎಂದರು.