Wednesday, January 22, 2025
ಸುದ್ದಿ

ಕೊರೊನಾ ಎಫೆಕ್ಟ್ : ನಗರಸಭಾ ಸದಸ್ಯ ಜಗನ್ನಿವಾಸ್ ರಾವ್, ಪೌರಾಯುಕ್ತೆ ರೂಪಾ ಶೆಟ್ಟಿ ನೇತೃತ್ವದಲ್ಲಿ ಪುತ್ತೂರು ನಗರದಾದ್ಯಂತ ಅಂತರ ಕಾಯ್ದು ಕೊಳ್ಳಲು ದಿನಸಿ, ಮೆಡಿಕಲ್, ತರಕಾರಿ ಅಂಗಡಿಗಳ ಮುಂದೆ ಮಾರ್ಕಿಂಗ್ – ಕಹಳೆ ನ್ಯೂಸ್

ಪುತ್ತೂರು: ಕೊರೊನಾ ಎಫೆಕ್ಟ್‌ನಿಂದಾಗಿ ದೇಶದಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದು, ಜನರು ದಿನ ನಿತ್ಯದ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಗ್ಗೆ ಲಾಕ್‌ಡೌನ್ ಸಡಿಲೀಕರಣದ ವೇಳೆ ಜನರು ಅಂಗಡಿಗಳಿಗೆ ನೂಕುನುಗ್ಗಲು, ಮುಗಿ ಬೀಳುವುದನ್ನು ತಪ್ಪಿಸಲು ಗ್ರಾಹಕರಲ್ಲಿ ನಿಗದಿತ ಅಂತರ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ದಿನಸಿ, ಮೆಡಿಕಲ್, ತರಕಾರಿ ಅಂಗಡಿಗಳ ಮುಂದೆ ನಗರಸಭೆ ಅಧಿಕಾರಿಗಳು ವೃತ್ತದ ಮಾರ್ಕ್ ಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಅಂಗಡಿಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಈ ವೇಳೆ ಜನಸಂದಣಿ ಹೆಚ್ಚಾದರೆ ವೈರಸ್ ಹರಡೋ ಲಕ್ಷಣ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜನರು ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕೆಂದು ೧ ಮೀಟರ್ ಅಂತರದಲ್ಲಿ ಬಿಳಿ ಸುಣ್ಣದಿಂದ ವೃತ್ತದ ಮಾರ್ಕ್ ಮಾಡಲಾಗಿದ್ದು, ಗ್ರಾಹಕರು ಆಯಾ ವೃತ್ತದಲ್ಲೇ ನಿಂತು ಮುಂದಿನ ವೃತ್ತಕ್ಕೆ ಹೋಗಬೇಕು. ಬಳಿಕ ವಸ್ತುಗಳನ್ನು ಖರೀದಿಸಬೇಕು. ಜನರು ಒಟ್ಟಿಗೆ ಸೇರುವುದನ್ನು ತಡೆಯಲು ಈ ಮಾರ್ಗ ನಗರಸಭೆ ಕಂಡು ಕೊಂಡಿದೆ. ಇದರ ಜೊತೆ ಅಂಗಡಿಯ ಗೋಡೆಯಲ್ಲಿ ಮುನ್ನೆಚ್ಚರಿಕೆ ಭಿತ್ತಿ ಪತ್ರವನ್ನು ನಗರಸಭೆ ಅಂಟಿಸಿದೆ. ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಪೌರಾಯುಕ್ತೆ ರೂಪಾ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ನಗರಸಭೆ ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ರಾಜೇಶ್ ನಾಕ್ ಸೇರಿದಂತೆ ನಗರಸಭೆ ಸಿಬಂದಿಗಳು ಕಾರ್ಯಾಚರಣೆ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾರ್ಕ್ ಮಾಡಲಾಗಿರುವ ವೃತ್ತದಲ್ಲೇ ಗ್ರಾಹಕರು ನಿಲ್ಲಬೇಕು. ಒಂದು ವೃತ್ತದಿಂದ ಮತ್ತೊಂದು ವೃತ್ತಕ್ಕೆ ಅಂತರವಿದ್ದು, ಅದರ ಮೂಲಕವೇ ಮುಂದೆ ಸಾಗಬೇಕು. ಮುಂದಿನ ದಿನಗಳ್ಲಿ ಮಾರ್ಕ್ ಮಾಸಿ ಹೋದರೆ ಅಂಗಡಿಯವರೇ ಬಾಕ್ಸ್ ಹಾಕಿಕೊಳ್ಳಬೇಕು.

– ರೂಪಾ ಶೆಟ್ಟಿ, ಪೌರಾಯುಕ್ತರು ನಗರಸಭೆ