Thursday, January 23, 2025
ಸುದ್ದಿ

Breaking News : ಮಂಗಳೂರಿನ ಉರ್ವ ಮಾರಿಗುಡಿ ಮಾರ್ಕೆಟ್ ನಲ್ಲಿ ತುಂಬಿ ತುಳುಕಾಡುತ್ತಿದ್ದ ಜನ ; ಸಾಮಾಜಿಕ ಅಂತರ ಅಂದರೇನು..? ಇದೇನಾ..? – ಕಹಳೆ ನ್ಯೂಸ್

ಮಂಗಳೂರು : ನಗರದ ಉರ್ವ ಮಾರಿಗುಡಿ ಮಾರ್ಕೆಟ್ ನಲ್ಲಿ ಇಂದು ಬೆಳಗ್ಗೆ ಕಂಡ ದೃಶ್ಯವಿದು. ಮಾರ್ಕೆಟ್ ತುಂಬೆಲ್ಲಾ ಬಿಸಿ ಬಿಸಿ ವ್ಯಾಪಾರ, ವಿಶ್ವವ್ಯಾಪಿ ಕೊರೊನಾ ತನ್ನ ಕಬಂಧ ಬಾಹುವನ್ನು ಚಾಚಿದ್ದು,‌ ಜನರು ಯಾವುದೇ ಮುಂಜಾಗ್ರತಾ ಕ್ರಮ ಬಿಡಿ, ಯಾವುದೇ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಬೇಕಾ ಬಿಟ್ಟಿಯಾಗಿ ವರ್ತಿಸಿದ ಘಟನೆ ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತಂತೆ ಸಾರ್ವಜನಿಕರೂ ಟ್ವೀಟ್ ಮಾಡಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಜಾಗೃತಿ ಮೂಡಿಸಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು