Thursday, January 23, 2025
ಸುದ್ದಿ

Breaking News : ನೇತ್ರಾವತಿ ನದಿಗೆ ಈಜಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು – ಕಹಳೆ ನ್ಯೂಸ್

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಲು ಸ್ನೇಹಿತರ ಜೊತೆ ತೆರಳಿದ ಯುವಕನೋರ್ವ ಅಕಸ್ಮಾತ್ ಅಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಬರಿಮಾರು ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಮಾಣಿ ಕರ್ನಾಟಕ ಪ್ರೌಢ ಶಾಲೆ ಸಮೀಪ ಪಳಿಕೆ ನಿವಾಸಿ ಮಹಮ್ಮದ್ ಎಂಬವರ ಮಗ ಅಬ್ದುಲ್ ರಹಮಾನ್ (31) ಮೃತಪಟ್ಟ ವ್ಯಕ್ತಿ.
ಮಧ್ಯಾಹ್ನ ದ ಬಳಿಕ ರಹಿಮಾನ್ ಅವರು ತನ್ನ ಮೂವರು ಸ್ನೇಹಿತರಾದ ಸಮಾದ್ ಮುಸ್ತಫಾ ಮತ್ತು ಸಮಾದ್ ಎಂಬವರ ಜೊತೆಯಲ್ಲಿ ಬರಿಮಾರು ಕಡವಿನಬಾಗಿಲು ಎಂಬಲ್ಲಿ ನೇತ್ರಾವತಿ ನದಿಗೆ ಈಜಲು ತೆರಳಿದ್ದರು.

ಆದರೆ ಸುಮಾರು 4 ಗಂಟೆಯ ವೇಳೆಗೆ ನೀರಿನಲ್ಲಿ ಈಜಾಡುತ್ತಿದ್ದ ರಹಮಾನ್ ಅವರು ಅಕಸ್ಮಾತ್ ಅಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ನೀರಿನಲ್ಲಿ ಮುಳುಗಿದ ಸುದ್ದಿ ತಿಳಿದ ಕ್ಷಣವೇ
ಕಕಾರ್ಯಪವೃತ್ತರಾದ ಸ್ಥಳೀಯ ಈಜುಗಾರರು ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ.
ಸುಮಾರು 5.30 ಗಂಟೆ ವೇಳೆ ಗೆ ರಹಮಾನ್ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದ್ದು ಈಜುಗಾರರು ನದಿಯಿಂದ ಮೇಲಕ್ಕೆತ್ತಿ ಹಾಕಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು