Thursday, January 23, 2025
ಸುದ್ದಿ

Breaking News : ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಕರ್ಮಕಾಂಡ ಆಡಿಯೋ ಪ್ರಕರಣ ; ಬಿಗ್ ಇಂಪ್ಯಾಕ್ಟ್ – ಡಿ.ಎಂ.ಓ ಡಾ.ರಾಜೇಶ್ವರಿದೇವಿ ವರ್ಗಾವಣೆ ; ನೂತನ ಡಿ.ಎಂ.ಓ. ಆಗಿ ಡಾ.‌ಸದಾಶಿವ ನೇಮಕ – ಕಹಳೆ ನ್ಯೂಸ್

ಮಂಗಳೂರು : ವೆನ್ಲಾಕ್ ಆಸ್ಪತ್ರೆ ಕರ್ಮಕಾಂಡ ಆಡಿಯೋ ವೈರಲ್ ಹೌಡ್ರಾಮ ಬೆನ್ನಲ್ಲೇ ಬಿಗ್ ಇಂಪ್ಯಾಕ್ಟ್ ನಡೆದಿದೆ. ವೆನ್ಲಾಕ್ ಆಸ್ಪತ್ರೆಯ ಡಿ.ಎಂ.ಓ ಡಾ.ರಾಜೇಶ್ವರಿದೇವಿಯವರನ್ನು ಬಂಟ್ವಾಳ ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವೆನ್ಲಾಕ್ ನ ಮುಖ್ಯ ಡಿ.ಎಂ.ಓ ಆಗಿ ಡಾ.ಸದಾಶಿವ ಅವರನ್ನು ನೇಮಕ ಮಾಡಲಾಗಿದ್ದು, ಇವರು ಪ್ರಸ್ತುತ‌ ಬಂಟ್ವಾಳ ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆ ಅಂತಾ ನಮೂದು ಮಾಡಲಾಗಿದೆ.

ಇತ್ತೀಚೆಗೆ ವೆನ್ಲಾಕ್ ಆಡಿಯೋದಲ್ಲಿ ಸುದ್ದಿಯಾಗಿದ್ದ ಡಾ.ರಾಜೇಶ್ವರಿದೇವಿ‌ ಅವರು ಕೊರೋನಾ ರೋಗಿಗಳ ಬಗ್ಗೆ ನಿರ್ಲಕ್ಷ್ಯ ತೋರಿದ್ದರು ಎಂದು ಆಡಿಯೋ ವೈರಲ್ ಆಗಿತ್ತು. ಆದಾದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.