ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ – 28 ವಾರ್ಡ್‌ಗಳಲ್ಲಿ ಮೂರು ವಿಭಾಗ-ತಲಾ 2 ಗಂಟೆ ಮಾತ್ರ ಪೇಟೆ ಎಂಟ್ರಿಗೆ ಅವಕಾಶ ; ಮಹತ್ವದ ನಿರ್ಧಾರ ಹೊರಡಿಸಿದ ಪೊಲೀಸ್ ಇಲಾಖೆ – ಕಹಳೆ ನ್ಯೂಸ್
ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅಗತ್ಯ ವಸ್ತುಗಳ ಖರೀದಿಸುವ ಸಮಯದಲ್ಲಿ ಉಂಟಾಗುವ ಜನದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಪುತ್ತೂರು ನಗರಸಭೆಯ ೨೮ ವಾರ್ಡ್‌ಗಳನ್ನು ಮೂರು ವಿಭಾಗಳನ್ನಾಗಿ ವಿಂಗಡಿಸಿ ಸಮಯ ನಿಗದಿಪಡಿಸುವ ಹೊಸ ಮಾರ್ಗವನ್ನು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಮ್.ಲಕ್ಷ್ಮೀ ಪ್ರಸಾದ್ ಅವರ ಚಿಂತನೆಯಂತೆ ಪುತ್ತೂರು ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರು ಹೊಸ ಮಾರ್ಗಸೂಚಿ ಪ್ರಕಟಿಸಿದ್ದಾರೆ.
ಸಮಯ ನಿಗದಿ ವಿವರ:
ಬೆಳಿಗ್ಗೆ ಗಂಟೆ 6 ರಿಂದ 8ರ ತನಕ:
ವಾರ್ಡ್ ಸಂಖ್ಯೆ ಕಬಕ ೧, ಕಬಕ ೨, ಪಡ್ನೂರು ೩, ಬನ್ನೂರು ೪, ಬನ್ನೂರು ೫, ಬನ್ನೂರು ೬, ಚಿಕ್ಕಮುಡ್ನೂರು ೭, ಚಿಕ್ಕಮುಡ್ನೂರು ೮, ಚಿಕ್ಕಮುಡ್ನೂರು ೯ ವಾರ್ಡ್‌ಗಳ ಜನರು ನಿಗದಿ ಪಡಿಸಿದ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಖರಿದೀಸಲು ಪೇಟೆಗೆ ಬರುವುದು. ಈ ಭಾಗದ ನಗರಸಭಾ ಸದಸ್ಯರಾದ ಶಿವರಾಮ, ವಸಂತ ಕಾರೆಕ್ಕಾಡು, ಕೆ.ಜಿವಂಧರ್ ಜೈನ್, ಗೌರಿ ಬನ್ನೂರು, ಕೆ.ಫಾತಿಮತ್ ಝೂರ, ಮೋಹಿನಿ ವಿಶ್ವನಾಥ, ಲೀಲಾವತಿ, ಬಾಳಪ್ಪ ಯಾನೆ ಸುಂದರ ಪೂಜಾರಿ, ರೋಬಿನ್ ತಾವ್ರೋ ಅವರು ತಮ್ಮ ವಾರ್ಡ್ ಸದಸ್ಯರಿಗೆ ಮಾಹಿತಿ ನೀಡುವುದು.
ಬೆಳಿಗ್ಗೆ ಗಂಟೆ 8 ರಿಂದ 10 ರ ತನಕ: ವಾರ್ಡ್ ಸಂಖ್ಯೆ ಪುತ್ತೂರು ಕಸಬಾ ೧೦ ರಿಂದ ೧೮ನ ಜನರು ನಿಗದಿ ಪಡಿಸಿದ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸುವುದು. ಈ ವಾರ್ಡ್‌ಗಳಿಗೆ ಸಂಬಂಧಿಸಿ ನಗರಸಭಾ ಸದಸ್ಯರಾದ ಪ್ರೇಮ್ ಕುಮಾರ್, ಶಕ್ತಿಸಿನ್ಹ, ಪದ್ಮನಾಭ ನಾಯ್ಕ್, ಪಿ.ಜಿ.ಜಗನ್ನಿವಾಸ ರಾವ್, ಪ್ರೇಮಲತಾ ರಾವ್, ಕೆ.ಸಂತೋಷ್ ಕುಮಾರ್, ನವೀನ್ ಕುಮಾರ್, ಅಶೋಕ್ ಶೆಣೈ, ಯಶೋದಾ ಹರೀಶ್ ಅವರು ಜನರಿಗೆ ಸರಿಯಾದ ಮಾಹಿತಿ ನೀಡಬೇಕು.
ಬೆಳಿಗ್ಗೆ 10 ರಿಂದ 12ರ ತನಕ:
ವಾರ್ಡ್ ಸಂಖ್ಯೆ ಪುತ್ತೂರು ಕಸಬಾ ೧೯, ಪುತ್ತೂರು ಕಸಬಾ ೨೦, ಪುತ್ತೂರು ಕಸಬಾ ೨೧, ಪುತ್ತೂರು ಕಸಬಾ ೨೨, ಪುತ್ತೂರು ಕಸಬಾ ೨೩, ಕೆಮ್ಮಿಂಜೆ ೨೪, ಕೆಮ್ಮಿಂಜೆ ೨೫, ಕೆಮ್ಮಿಂಜೆ ೨೬, ಕೆಮ್ಮಿಂಜೆ ೨೭, ಕೆಮ್ಮಿಂಜೆ ೨೮ ವಾರ್ಡ್‌ನವರಿಗೆ ಅವಕಾಶ ನೀಡಲಾಗಿದೆ. ಈ ಭಾಗದ ನಗರಸಭಾ ಸದಸ್ಯರಾದ ವಿದ್ಯಾಗೌರಿ, ದೀಕ್ಷಾ ಪೈ, ಇಂದಿರಾ, ಶಶಿಕಲಾ, ಮನೋಹರ್ ಕಲ್ಲಾರೆ, ಬಾಲಚಂದ್ರ, ರೋಹಿಣಿ, ಮಮತ ರಂಜನ್, ಬಿ.ಶೈಲಾ ಪೈ, ಇಸುಬು ಅವರು ತಮ್ಮ ವಾರ್ಡ್‌ನ ಜನರಿಗೆ ಮಾಹಿತಿ ನೀಡುವಂತೆ ಮಾರ್ಗದರ್ಶಿ ಪ್ರಕಟಿಸಲಾಗಿದೆ.