Thursday, January 23, 2025
ಸುದ್ದಿ

Breaking News : ಕಹಳೆ ನ್ಯೂಸ್ ಇಂಪ್ಯಾಕ್ಟ್ : ಮಂಗಳೂರಿನ ಉರ್ವ ಮಾರಿಗುಡಿ ಮಾರ್ಕೆಟ್ ನಲ್ಲಿ ಅವ್ಯವಸ್ಥೆ ವರದಿ – ಎಚ್ಚತ್ತ ಅಧಿಕಾರಿಗಳು – ಪೊಲೀಸ್ ಬೀಟ್ ; ಅಧಿಕಾರಿಗಳ ಆದೇಶದಂತೆ ಸರತಿಸಾಲಿನಲ್ಲಿ ನಿಂತು ಜನರಿಂದ ಅಗತ್ಯ ವಸ್ತುಗಳ ಖರೀದಿ – ಕಹಳೆ ನ್ಯೂಸ್

ಮಂಗಳೂರು : ನಗರದ ಉರ್ವ ಮಾರಿಗುಡಿ ಮಾರ್ಕೆಟ್ ನಲ್ಲಿ ನಿನ್ನೆ ಬೆಳಗ್ಗೆ ಬಿಸಿ ಬಿಸಿ ವ್ಯಾಪಾರ, ವಿಶ್ವವ್ಯಾಪಿ ಕೊರೊನಾ ತನ್ನ ಕಬಂಧ ಬಾಹುವನ್ನು ಚಾಚಿದ್ದರು, ಜನರು ಯಾವುದೇ ಮುಂಜಾಗ್ರತಾ ಕ್ರಮ ಬಿಡಿ, ಯಾವುದೇ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಬೇಕಾ ಬಿಟ್ಟಿಯಾಗಿ ವರ್ತಿಸಿದ ಘಟನೆಯನ್ನು ಕಹಳೆ ನ್ಯೂಸ್ ವರದಿ ಮಾಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತಂತೆ ಅನೂಷ & ಪ್ರಶಾಂತ್ ಎಂಬ ಸ್ಥಳೀಯರು ಕಹಳೆ ನ್ಯೂಸ್ ಗೆ ಈ ಮಾಹಿತಿ ನೀಡಿದ್ದು, ಅವರ ಮಾಹಿತಿ ಆದಾರದಲ್ಲಿ ಕಹಳೆ ನ್ಯೂಸ್ ವರದಿ ಪ್ರಕಟಿಸಿತ್ತು, ಇದರಿಂದ ಎಚ್ಚತ್ತ ಅಧಿಕಾರಿಗಳು, ಇಂದು ಜನರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾರ್ಕೆಟ್ ನಲ್ಲಿ ಇಂದು ಬೆಳಗ್ಗೆಯಿಂದಲೇ ಪೊಲೀಸ್ ಬೀಟ್ ಹಾಕಿದ್ದು, ಮಾಸ್ಕ್ ಧರಿಸದೇ ಖರೀದಿಗೆ ಅವಕಾಶ ನಿರಾಕರಿಸಿದ್ದಾರೆ, ಅಲ್ಲದೆ, ಇಂದು ಸಾಮಾಜಿಕ ಅಂತರ ಕಾಯ್ದುಕೊಂದು ಸರತಿ ಸಾಲಿನಲ್ಲಿ ವ್ಯಾಪಾರ ನಡೆಯುತ್ತಿದೆ.

ಕಹಳೆ ನ್ಯೂಸ್ ವರದಿಯಿಂದ ಸಾಮಾಜಿಕ ಜಾಗೃತಿ ಮೂಡಿದೆ.