Friday, January 24, 2025
ಸುದ್ದಿ

ರಾಜ್ಯದಲ್ಲಿ ಕೊರೊನಾ ಸೋಂಕಿತ ಮೊದಲ ವ್ಯಕ್ತಿ ಗುಣಮುಖ : ಆಸ್ಪತ್ರೆಯಿಂದ ಡಿಸ್ಚಾರ್ಜ್ – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದ ರಾಜಧಾನಿಗೆ, ಅಲ್ಲದೇ ರಾಜ್ಯಕ್ಕೆ ಮೊದಲ ಕೊರೊನಾ ವೈರಸ್ ಸೋಂಕು ಹೊತ್ತು ತಂದಿದ್ದಂತ ಮೊದಲ ಟೆಕ್ಕಿ, ಕೊರೊನಾ ವೈರಸ್ ಸೋಂಕಿನಿಂದ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಅಲ್ಲದೇ, ರಾಜೀವ್ ಗಾಂಧಿ ಆಸ್ಪತ್ರೆಯಿಂದ ಗುಣಮುಖರಾದ ಕಾರಣ ಡಿಸ್ಚಾರ್ಜ್ ಕೂಡ ಆಗಿದ್ದಾರೆ.

ಹೌದು.. ಅಮೇರಿಕಾದಿಂದ ಬೆಂಗಳೂರಿಗೆ ಆಗಮಿಸಿದ್ದ ಟೆಕ್ಕಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ಕಳೆದ ತಿಂಗಳು ದೃಢ ಪಟ್ಟಿತ್ತು. ಅಲ್ಲದೇ ಇದೇ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಮೊದಲ ಪ್ರಕರಣ ಕೂಡ ಆಗಿತ್ತು. ಇಂತಹ ವ್ಯಕ್ತಿಗೆ ನಿರಂತರವಾಗಿ ಅವಿರತವಾಗಿ ರಾಜೀವ್ ಗಾಂಧಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ ಪರಿಣಾಮವಾಗಿ, ಇಂದು ಸಂಪೂರ್ಣ ಗುಣಮುಖರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗಾಗಿ ಬೆಂಗಳೂರಿನ ವೈಟ್ ಫೀಲ್ಡ್ ಮೂಲದ ಮೊದಲ ಕೊರೊನಾ ಸೋಂಕಿತ ವ್ಯಕ್ತಿಯನ್ನು ಇಂದು ರಾಜೀವ್ ಗಾಂಧಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಲಾಯಿತು. ಈ ಮೂಲಕ ರಾಜ್ಯದಲ್ಲಿ ದಾಖಲಾದಂತ ಮೊದಲ ಕೊರೊನಾ ಸೋಂಕಿತ ಪ್ರಕರಣದ ವ್ಯಕ್ತಿ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಅಲ್ಲದೇ ಕೊರೊನಾ ಭಯ ಪಡುವಂತ ಖಾಯಿಲೆ ಅಲ್ಲ, ನಿರಂತರವಾಗಿ ಚಿಕಿತ್ಸೆ ಮೂಲಕ ಗುಣಪಡಿಸಬಹುದು ಎಂಬ ಆಶಾ ಭಾವನೆಯನ್ನು ಹುಟ್ಟು ಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು