Thursday, November 28, 2024
ಸುದ್ದಿ

ಕೊರೊನಾ ವಿರುದ್ಧ ಹೋರಾಡಲು 50 ಲಕ್ಷ ರೂ. ದೇಣಿಗೆ ನೀಡಿದ ತೆಂಡೂಲ್ಕರ್ – ಕಹಳೆ ನ್ಯೂಸ್

ನವದೆಹಲಿ: ಕೊರೊನಾ ವಿರುದ್ಧದ ಹೋರಾಡಲು ಸೆಲೆಬ್ರಿಟಿಗಳು, ಕ್ರಿಕೆಟಿಗರು ಮತ್ತು ಕ್ರೀಡಾಪಟುಗಳು ಸಹಾಯ ಮಾಡಲು ಸರ್ಕಾರಗಳಿಗೆ ದೇಣಿಗೆ ನೀಡುತ್ತಿದ್ದಾರೆ. ಎಂ.ಎಸ್.ಧೋನಿ, ಪಿ.ವಿ ಸಿಂಧು, ಹಿಮಾ ದಾಸ್, ಭಜರಂಗ್ ಪೂನಿಯಾ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು 50 ಲಕ್ಷ ರೂ. ದೊಡ್ಡ ದೇಣಿಗೆಯನ್ನು ನೀಡಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು ಪ್ರಧಾನ ವಿಪತ್ತು ಪರಿಹಾರ ನಿಧಿಗೆ 25 ಲಕ್ಷ ರೂ. ಹಾಗೂ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಲು ನಿರ್ಧರಿಸಿದ್ದಾರೆ. ತೆಂಡೂಲ್ಕರ್ ಅವರ ಸಹಾಯದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

46 ವರ್ಷದ ಸಚಿನ್ ತೆಂಡೂಲ್ಕರ್ ಅವರು, ಈ ಹಿಂದೆ ಕೊರೊನಾ ವೈರಸ್ ವಿರುದ್ಧದ ಹೋರಾಟವನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ಆಟಗಾರ ಎದುರಿಸುವ ಸವಾಲುಗಳಿಗೆ ಹೋಲಿಸಿದ್ದರು. ‘ಬಹುಶಃ ನಾವೆಲ್ಲರೂ ಆಟದ ಹಳೆಯ ಸ್ವರೂಪದಿಂದ ಪಾಠಗಳನ್ನು ಕಲಿಯುವ ಸಮಯ ಬಂದಿದೆ. ನಾವು ಉತ್ತಮವಾಗಿ ಇರಬೇಕಾದರೆ ತಾಳ್ಮೆ ನಮಗೆ ಬೇಕಾಗಿದೆ’ ಎಂದು ಸಚಿತ್ ತಿಳಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಷ್ಟೇ ಅಲ್ಲದೆ ಸಚಿನ್ ತೆಂಡೂಲ್ಕರ್ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂಚಿಕೊಂಡಿದ್ದ ಸಚಿನ್, ‘ಕೇಂದ್ರ ಸರ್ಕಾರ, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಮನೆಯಲ್ಲಿ ಇರುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೂ ಕೆಲವರು ಇದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ನಾವು ಕೆಲವು ವಿಡಿಯೋಗಳನ್ನು ನೋಡಿದ್ದೇನೆ. ಕೆಲವರು ಹೊರಗಡೆ ಕ್ರಿಕೆಟ್ ಆಡುತ್ತಿದ್ದಾರೆ. ಒಮ್ಮೆ ಕೊರೊನಾ ವೈರಸ್ ದೇಶದಲ್ಲಿ ಕೈಮೀರಿದರೆ ನಮ್ಮ ಹೆಣಗಳನ್ನು ಉರುಳಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಗಳಾದ ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್ ಒಟ್ಟು 4,000 ಫೇಸ್ ಮಾಸ್ಕ್ ಗಳನ್ನು ಬರೋಡಾ ಪೊಲೀಸ್ ಮತ್ತು ಆರೋಗ್ಯ ಇಲಾಖೆಗೆ ನೀಡಿದ್ದಾರೆ. ಮತ್ತೊಂದೆಡೆ ಧೋನಿ ಇತ್ತೀಚೆಗೆ ಪುಣೆ ಮೂಲದ ಎನ್‍ಜಿಒ ಮೂಲಕ 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ.