Friday, January 24, 2025
ಸುದ್ದಿ

Breaking News : ಕೇರಳದಲ್ಲಿ ಮತ್ತೆ 39 ಜನರಲ್ಲಿ ಕೊರೊನಾ ಸೋಂಕು ಪತ್ತೆ : ಕಾಸರಗೋಡಿನಲ್ಲೇ 34 ಜನರಿಗೆ ಸೋಂಕು – ಪರಿಸ್ಥಿತಿ ಗಂಭೀರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಸಿಎಂ ಪಿಣರಾಯಿ ವಿಜಯನ್ – ಕಹಳೆ ನ್ಯೂಸ್

ತಿರುವನಂತಪುರ : ನೆರೆಯ ರಾಜ್ಯ ಕೇರಳದಲ್ಲಿ ಮಾರಕ ಕೊರೊನಾ ಸೋಂಕು ಭಾರಿ ಆತಂಕ ಸೃಷ್ಟಿಸಿದೆ. ದೇಶದಲ್ಲೇ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಇಡೀ ರಾಜ್ಯ ತತ್ತರಿಸಿದೆ. ಏತನ್ಮಧ್ಯೆ, ಕೇರಳದಲ್ಲಿ ಮತ್ತೆ 39 ಜನರಲ್ಲಿ ಮಾರಕ ಸೋಂಕು ದೃಢಪಟ್ಟಿದೆ.

ಈ ಕುರಿತು ಮಾಹಿತಿ ನೀಡಿದ ಸಿಎಂ ಪಿಣರಾಯಿ ವಿಜಯನ್, ಕೇರಳದಲ್ಲಿ ಮತ್ತೆ 39 ಜನರಲ್ಲಿ ಮಾರಕ ಸೋಂಕು ಪಾಸಿಟಿವ್ ಬಂದಿದ್ದು, ಸೋಂಕು ಪೀಡಿತರ ಸಂಖ್ಯೆ 164ಕ್ಕೆ ಏರಿಕೆಯಾಗಿದೆ. ಇನ್ನು ಕಾಸರಗೋಡಿನಲ್ಲೇ 34 ಜನರಿಗೆ ಸೋಂಕು ತಾಕಿದ್ದು, ಈವರೆಗೆ ಕೇರಳದಲ್ಲಿ 1 ಲಕ್ಷ ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ವಿವರಿಸಿದರು. ಅಲ್ಲದೇ, ಕೇರಳದಲ್ಲಿ ಸದ್ಯದ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಪಿಣರಾಯಿ ವಿಜಯನ್ ಆತಂಕ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇರಳದಲ್ಲಿ ಮಾರಕ ಸೋಂಕು ದಿನೇದಿನೇ ವ್ಯಾಪಿಸುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ

ಜಾಹೀರಾತು
ಜಾಹೀರಾತು
ಜಾಹೀರಾತು