Friday, January 24, 2025
ಸುದ್ದಿ

Breaking News : ರಾಜ್ಯದಲ್ಲಿ ಇಂದು 9 ಕೊರೊನಾ ಕೇಸ್ ದೃಢ : ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆ – ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ – ಕಹಳೆ ನ್ಯೂಸ್

ಬೆಂಗಳೂರು : ಕರ್ನಾಟಕದಲ್ಲಿ ಇಲ್ಲಿಯವರೆಗೆ ಒಟ್ಟು 64 ಕೋವಿಡ್-19 ಸೋಂಕಿತ ಪ್ರಕರಣಗಳು ಖಚಿತವಾಗಿದ್ದು, ಇಂದು ಒಂದೇ ದಿನ 9ಕ್ಕೆ ಸೋಂಕಿತ ಪ್ರಕರಣ ಏರಿಕೆಯಾಗಿದೆ. ಅಲ್ಲದೇ ಇವುಗಳಲ್ಲಿ 3 ಕೊರೊನಾ ವೈರಸ್ ಸೋಂಕಿತರು ಮೃತಪಟ್ಟಿದ್ದರು, 5 ಜನರು ಸಂಪೂರ್ಣವಾಗಿ ಗುಣಮುಖರಾಗಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಿಂದ ಅಧಿಕೃತವಾಗಿ ತಿಳಿದು ಬಂದಿದೆ.

ಈ ಕುರಿತಂತೆ ಆರೋಗ್ಯ ಇಲಾಖೆ ಅಧಿಕೃತವಾಗಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಒಂದೇ ದಿನ 9 ಕೊರೊನಾ ಸೋಂಕಿತ ಪ್ರಕರಣಗಳು ರಾಜ್ಯದಲ್ಲಿ ದೃಢ ಪಟ್ಟಿವೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಎಲ್ಲೆಲ್ಲಿ ಕೊರೊನಾ ವೈರಸ್ ಪಾಸಿಟಿವ್ ದೃಢ. ?

ಜಾಹೀರಾತು
ಜಾಹೀರಾತು
ಜಾಹೀರಾತು
  1. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ತಿಂಗಳ ಹೆಣ್ಣು ಮಗುವಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಈ ಮಗುವಿನ ಪೋಷಕರು ಕೇರಳದಲ್ಲಿರುವುದಾಗಿ ತಿಳಿಸಿದ್ದು, ಇವರೊಂದಿಗೆ 6 ಜನರ ಸಂಪರ್ಕ ಹೊಂದಿದವರ ಮೇಲೆ ನಿಗಾ ವಹಿಸಲಾಗಿದೆ.
  2. ಬೆಂಗಳೂರಿಗೆ ಮಾರ್ಚ್ 15ರಂದು ಕೊಯಂಬತ್ತೂರ್ ಮೂಲಕ ಸಂಚರಿಸಿ ಆಗಮಿಸಿದ್ದಂತ 20 ವರ್ಷದ ವ್ಯಕ್ತಿಗೂ ಕೊರೊನಾ ವೈರಸ್ ಸೋಂಕು ದೃಢ ಪಟ್ಟಿದೆ
  3. ಬೆಂಗಳೂರಿನ 25 ವರ್ಷದ ವ್ಯಕ್ತಿಯೊಬ್ಬರು ಮಾರ್ಚ್ 18ರಂದು ಲಂಡನ್ ಗೆ ತೆರಳಿ ವಾಪಾಸ್ ಆಗಿದ್ದರು. ಇವರಿಗೂ ಕೊರೊನಾ ಸೋಂಕು ತಲುಗುಲಿರುವುದು ದೃಢ ಪಟ್ಟಿದೆ.
  4. ಕೊರೊನಾ ವೈರಸ್ ಸೋಂಕಿತ 25ನೇ ವ್ಯಕ್ತಿಯೊಬ್ಬರೊಂದಿಗೆ ಸಂಪರ್ಕ ಹೊಂದಿದ್ದಂತ ಬೆಂಗಳೂರಿನ 35 ವರ್ಷದ ಮಹಿಳೆಗೂ ಕೊರೊನಾ ಸೋಂಕು ತಗುಲಿದೆ.
  5. ಕೊರೊನಾ ಸೋಂಕಿದ್ದಂತ 60 ವರ್ಷದ ವ್ಯಕ್ತಿ ತುಮಕೂರಿನಲ್ಲಿ ಸಾವನ್ನಪ್ಪಿರುವುದಾಗಿ ತಿಳಿಸಿದೆ.
  6. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತ 25ನೇ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದಂತ 33 ವರ್ಷದ ಮನೆ ಕೆಲಸದಾಕೆಗೂ ಕೊರೊನಾ ವೈರಸ್ ಸೋಂಕು ತಗುಲಿದೆ.
  7. ಉತ್ತರಕನ್ನಡದ 22 ವರ್ಷದ ವ್ಯಕ್ತಿಯೊಬ್ಬರು ದುಬೈಗೆ ತೆರಳಿದ್ದರು. ಇಂತಹ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದಾಗಿ ತಿಳಿಸಿದೆ.
  8. ದಾವಣಗೆರೆ ಜಿಲ್ಲೆಯ 18 ವರ್ಷದ ವ್ಯಕ್ತಿಯೊಬ್ಬರು ಪ್ಯಾರಿಸ್ ಗೆ ತೆರಳಿ, ಮಾರ್ಚ್ 18ರಂದು ಭಾರತಕ್ಕೆ ಹಿಂದಿರುಗಿದ್ದರು. ಇಂತಹ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ದೃಢ ಪಟ್ಟಿದೆ
  9. ದಕ್ಷಿಣ ಕನ್ನಡದ 21 ವರ್ಷದ ವ್ಯಕ್ತಿಯೊಬ್ಬರು ದುಬೈಗೆ ತೆರಳಿ, ಮಾರ್ಚ್ 22ರಂದು ಭಾರತಕ್ಕೆ ಹಿಂದಿರುಗಿದ್ದರು. ಇವರಿಗೂ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ

ಅಂದಹಾಗೇ ಇಂದು ರಾಜ್ಯದಲ್ಲಿ ಪತ್ತೆಯಾಗಿದ್ದಂತ ಮೊದಲ ಕೊರೊನಾ ವೈರಸ್ ಸೋಂಕಿತ ಟೆಕ್ಕಿ, ಆತನ ಪತ್ನಿ, ಮಗಳು ಮತ್ತು ಸ್ನೇಹಿತ ಕೂಡ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದು, ಮತ್ತೊಬ್ಬ ಐದನೇ ವ್ಯಕ್ತಿ ಕೂಡ ಸಂಪೂರ್ಣ ಗುಣಮುಖರಾಗಿದ್ದಾರೆ. ಹೀಗಾಗಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇವರೊಂದಿಗೆ 6, 53, 60ನೇ ವ್ಯಕ್ತಿಗಳು ಮರಣ ಹೊಂದಿರುವುದಾಗಿ ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಿದೆ.