Friday, January 24, 2025
ಸುದ್ದಿ

ಕರ್ನಾಟಕ‌ ಸರಕಾರದಿಂದ ವಿಶೇಷ ಕೋವಿಡ್ ಸೈನಿಕರ ಕಾರ್ಯಪಡೆ ; ಅಧ್ಯಕ್ಷೆಯಾಗಿ‌ ಮಾಳವಿಕಾ ಅವಿನಾಶ್ ನೇಮಕ‌ – ಕಹಳೆ ನ್ಯೂಸ್

ಬೆಂಗಳೂರು : ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಲಾಕ್ ಡೌನ್ ಕಾರ್ಯಕಾಲದಲ್ಲಿ ಕೋವಿಡೇತರ ಸಮಸ್ಯೆಗಳನ್ನು ನಿಭಾಯಿಸಲು,
ವಿಶೇಷ ಕೋವಿಡ್ ಸೈನಿಕರ ಕಾರ್ಯಪಡೆಯನ್ನು ರಚಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಪಡೆಯ ಅಧ್ಯಕ್ಷೆಯಾಗಿ ಶ್ರೀಮತಿ ಮಾಳವಿಕಾ ಅವಿನಾಶರನ್ನು ನೇಮಿಸಿದೆ. ಉಪಾಧ್ಯಕ್ಷರಾಗಿ ಶೌರ್ಯ ಚಕ್ರ ಪುರಸ್ಕೃತ ಮೇಜರ್ ಪ್ರದೀಪ್ ಆರ್ಯರನ್ನು ನೇಮಿಸಿದೆ.
ಲಾಕ್ ಡೌನ್ ಕಾಲಾವಧಿಯಲ್ಲಿ, ಬಿಬಿಎಂಪಿ ಸಹಯೋಗದಲ್ಲಿ ಬಡವರು, ವಲಸೆ ಕಾರ್ಮಿಕರಿಗೆ ಊಟದ ಪೊಟ್ಟಣಗಳ ವಿತರಣೆ, ಅಗತ್ಯ ವಸ್ತುಗಳ ಪೂರೈಕೆ, ಪ್ರತ್ಯೇಕ ಸಹಾಯವಾಣಿಗಳ ಮೂಲಕ ಕೋವಿಡ್ ಕುರಿತ ತಜ್ಞರೊಂದಿಗೆ ಸಮಾಲೋಚನೆ, ರಾಜ್ಯ ಪೊಲೀಸರ ನೆರವಿನೊಂದಿಗೆ ವೃದ್ಧರು, ಅನಾರೋಗ್ಯತೆಯಿಂದ ಬಳಲುತ್ತಿರುವವರಿಗೆ ನೆರವು, ಕೋವಿಡ್ ಕುರಿತ ವದಂತಿಗಳನ್ನು ಹಬ್ಬದಂತೆ ತಡೆಯುವುದುದು ಮತ್ತು ಸರಿಯಾದ ಮಾಹಿತಿಯನ್ನು ತಲುಪಿಸುವುದು,ಹಿರಿಯ ನಾಗರೀಕರ ಔಷಧಿ ಮತ್ತು ಅಗತ್ಯ ವಸ್ತುಗಳ ಪೂರೈಕೆಯಂತಹ ಕಾರ್ಯಗಳನ್ನು ನೆರವೇರಿಸಲು ಈ ಕಾರ್ಯ ಪಡೆಯನ್ನು ರಚಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು