Thursday, January 23, 2025
ಸುದ್ದಿ

ಕೇರಳ ಸಿಎಂ ಕೇಂದ್ರಕ್ಕೆ ದೂರಿತ್ತ ಬೆನ್ನಲ್ಲೇ ಮಂಗಳೂರು – ಕಾಸರಗೋಡು ಸೇರಿ ಮೂರು ಹೆದ್ದಾರಿ ಓಪನ್ – ಕಹಳೆ ನ್ಯೂಸ್

ಬೆಂಗಳೂರು, ಮಾ 28  : ರಾಜ್ಯಕ್ಕೆ ಅಗತ್ಯವಾದ ಸರಕು ಸಾಮಗ್ರಿಗಳನ್ನು ಸಾಗಿಸಲು ನೆರವಾಗುವ ಪ್ರಮುಖ ರಾಜ್ಯ ಹೆದ್ದಾರಿಯನ್ನು ಕರ್ನಾಟಕ ಪೊಲೀಸರು ನಿರ್ಬಂಧಿಸಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿಗೆ ದೂರು ಸಲ್ಲಿಸಿದ ಬೆನ್ನಲ್ಲೇ ಕರ್ನಾಟಕವೂ ಕೇರಳ ರಾಜ್ಯಕ್ಕೆ ಅಗತ್ಯ ಸಾಮಾಗ್ರಿ ಸಾಗಿಸಲು ಮುಚ್ಚಿದ್ದ ಮೂರು ಹೆದ್ದಾರಿಗಳನ್ನು ತೆರೆಯಲು ನಿರ್ಧರಿಸಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂದ್ರ ಸಚಿವ ಸದಾನಂದ ಗೌಡ ಅವರು ಕೇರಳ ಮತ್ತು ಕರ್ನಾಟಕ ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಿ ಅಗತ್ಯ ವಸ್ತುಗಳ ಪೂರೈಕೆ ಬಗ್ಗೆ ಚಿಂತನೆ ನಡೆಸಲಾಗಿದೆ. ಅಲ್ಲದೆ ಇದರ ಬೆನ್ನಲ್ಲೇ ಕರ್ನಾಟಕ ಕೇರಳಕ್ಕೆ ಮೂರು ಮಾರ್ಗಗಳನ್ನು ತೆರೆಯಲು ನಿರ್ಧರಿಸಲಾದೆ ಎಂಬ ಮಾಹಿತಿ ಹರಿದಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕವು ತಲಶೇರಿ – ಕೊಡಗು ರಾಜ್ಯ ಹೆದ್ದಾರಿ 30 ಅನ್ನು ಮುಚ್ಚಿತ್ತು. ಈ ನಿಟ್ಟಿನಲ್ಲಿ ಕೇರಳ ಮುಖ್ಯಮಂತ್ರಿ ಕೇಂದ್ರಕ್ಕೆ ದೂರಿತ್ತು ಪತ್ರ ಬರೆದಿದ್ದರು.

ಇದೀಗ ಕೇಂದ್ರದ ಮದ್ಯಪ್ರವೇಶದಿಂದ ಅಗತ್ಯ ಸರಕು ಸಾಮಾಗ್ರಿಗಳ ಸಾಗಾಟಕ್ಕಾಗಿ ಮಂಗಳೂರು- ಕಾಸರಗೋಡು, ಮೈಸೂರು ಹೆಚ್ ಡಿ ಕೋಟೆ ಮೂಲಕ ಮನಂತವಾಡಿ ಮತ್ತು ಗುಂಡ್ಲುಪೇಟೆ ಸುಲ್ತಾನ್ ಬತ್ತೇರಿ ಮೂಲಕ ಮುತಂಗಾ ಹೆದ್ದಾರಿಗಳನ್ನು ತೆರೆಯಲಾಗುವುದು ಎಂದು ತಿಳಿದುಬಂದಿದೆ.

ಏತನ್ಮಧ್ಯೆ, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಶಾಸಕರು ವಿರಾಜ್‌ಪೇಟೆ – ಕುಟ್ಟು ಮಾರ್ಗ ತೆರೆಯುವುದಕ್ಕೆ ತೀವ್ರ ವಿರೋಧ ಕೇಳಿ ಬರುವುದರಿಂದ ಆ ಮಾರ್ಗ ತೆರಯಲಾಗುವುದಿಲ್ಲ ಎಂದು ತಿಳಿದುಬಂದಿದೆ.