ನಾಳೆಯೂ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಬಂದ್ ; ಹಾಲು ಉತ್ಪಾದಕರಿಂದ ಖರೀದಿಗೂ ನಿರ್ಬಂಧ – ಕೋಟ ಶ್ರೀನಿವಾಸ ಪೂಜಾರಿ – ಕಹಳೆ ನ್ಯೂಸ್
ಮಂಗಳೂರು: ಕೊರೊನಾ ವೈರಸ್ ಹಿನ್ನಲೆಯಲ್ಲಿ ನಾಳೆಯೂ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಬಂದ್ ಆಗಲಿದೆ.
ಸಾಮಾಜಿಕ ಅಂತರವನ್ನು ಕಾಯಲು ಸಂಪೂರ್ಣ ಬಂದ್ ಅನಿವಾರ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ವಿಶೇಷವಾಗಿ ಹಾಲು ವಿತರಣೆಗೆ ಸಂಪೂರ್ಣ ರಿಯಾಯಿತಿ ಇರುತ್ತದೆ. ಆದರೆ, ಹಾಲು ಉತ್ಪಾದಕರಿಂದ ಖರೀದಿ ಇರುವುದಿಲ್ಲ. ಔಷಧಾಲಯ ಕೂಡ ಎಂದಿನಂತೆ ತೆರೆಯಲಿದೆ.
ಸಿಲಿಂಡರ್ ಪೂರೈಕೆ, ಪೆಟ್ರೋಲ್ ಬಂಕ್ ಓಪನ್ ಸೇರಿದಂತೆ ಅಗತ್ಯ ವಸ್ತುಗಳ ಸಾಗಾಣಿಕೆಗೆ ಯಾವುದೇ ತೊಂದರೆಯಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಕಾರ್ಮಿಕ ಇಲಾಖೆಯಿಂದ ನಿರ್ಗತಿಕರಿಗೆ ಸಹಾಯ ಮಾಡಲಿದ್ದು, ಶಾಲೆ ಹಾಗೂ ಹಾಸ್ಟೆಲ್ ನಲ್ಲಿ ನಿರ್ಗತಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ.
ಇನ್ನು ಜನ ಸಂಕಷ್ಟದಲ್ಲಿದ್ದರೆ 1077 ಟೋಲ್ ಫ್ರೀ ನಂಬರ್ ಗೆ ಕಾಲ್ ಮಾಡಬಹುದಾಗಿದೆ.
ಸದ್ಯ ಜಿಲ್ಲೆಯ ವರ್ತಕರ ಸಭೆ ಕರೆಯಲಾಗಿದ್ದು, ದಿನಸಿ ವಸ್ತುಗಳನ್ನು ಡೋರ್ ಡೆಲಿವರಿ ಮಾಡುವ ಚಿಂತನೆ ಮಾಡಲಾಗಿದೆ.
ಆ್ಯಪ್ ಮೂಲಕ ದಿನಸಿ ಸಾಮಾಗ್ರಿಗಳನ್ನು ಡೋರ್ ಡೆಲಿವರಿ ಮಾಡಲಾಗುವುದು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.