Wednesday, January 22, 2025
ಸುದ್ದಿ

ಭಾರತದಲ್ಲಿ ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ – 25 ಮಂದಿ ಕೊರೊನಾಗೆ ಬಲಿ – ಕಹಳೆ ನ್ಯೂಸ್

ನವದೆಹಲಿ, ಮಾ.28 : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದ್ದು ಮೃತರ ಸಂಖ್ಯೆ 25 ಕ್ಕೆ ಏರಿಕೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವಾದ್ಯಂತ 30 ಸಾವಿರಕ್ಕೂ ಅಧಿಕ ಮಂದಿಯ ಬಲಿ ಪಡೆದಿರುವ ಕೊರೊನಾ ವೈರಸ್ ನಿಯಂತ್ರಣ ಭಾರತಕ್ಕೆ ಸವಲಾಗಿದ್ದು ಭಾರತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಾರಾಷ್ಟ್ರದಲ್ಲಿ ಒಂದೇ ದಿನ 33 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ಇದೀಗ 193 ಕ್ಕೆ ಏರಿಕೆಯಾಗಿದೆ. ಆ ಪೈಕಿ 28 ಮಂದಿ ಗುಣ ಮುಖರಾಗಿದ್ದು 6 ಮಂದಿ ಮೃತಪಟ್ಟಿದ್ದಾರೆ.

ಕೇರಳದಲ್ಲಿ ಶನಿವಾರ 6 ಪ್ರಕರಣಗಳು ದೃಡಪಟ್ಟಿದ್ದು 182 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆ ಪೈಕಿ 12 ಮಂದಿ ಗುಣಮುಖರಾಗಿದ್ದು ಶನಿವಾರ ಕೇರಳದಲ್ಲಿ ಕೊರೊನಾಕ್ಕೆ ಮೊದಲ ಬಲಿಯಾಗಿದೆ.

ಇನ್ನು ಕರ್ನಾಟಕದಲ್ಲಿ ಒಟ್ಟು 81 ಜನರಿಗೆ ಸೋಂಕು ತಗುಲಿದ್ದು ಈ ಪೈಕಿ 5 ಜನರು ಗುಣಮುಖರಾಗಿದ್ದರೆ ಮೂವರು ಸಾವನ್ನಪ್ಪಿದ್ದಾರೆ.

ತೆಲಂಗಾಣದಲ್ಲಿ 67, ಉತ್ತರಪ್ರದೇಶದಲ್ಲಿ 65, ಗುಜರಾತ್‌ನಲ್ಲಿ 55, ರಾಜಸ್ತಾನದಲ್ಲಿ 54, ದೆಹಲಿಯಲ್ಲಿ 49, ಪಂಜಾಬ್‌ನಲ್ಲಿ 38, ಲಡಾಕ್‌ನಲ್ಲಿ 7, ಹರ್ಯಾಣದಲ್ಲಿ 19, ಮಧ್ಯಪ್ರದೇಶದಲ್ಲಿ 30, ಅಂಡಮಾನ್‌ ನಿಕೋಬಾರ್‌ನಲ್ಲಿ 9, ಬಿಹಾರ್‌ನಲ್ಲಿ 9 ಜನರಿಗೆ ಸೋಂಕು ತಗುಲಿದೆ.

ಇನ್ನು ಈ ಕೊರೊನಾ ವೈರಸ್‌ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಮೋದಿ 21 ದಿನಗಳ ಕಾಲ ಭಾರತ ಲಾಕ್‌ಡೌನ್‌ಗೆ ಆದೇಶ ನೀಡಿದ್ದು ಆಯಾ ರಾಜ್ಯಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.