Wednesday, January 22, 2025
ಸುದ್ದಿ

Breaking News : ಉಡುಪಿಯಲ್ಲಿ ಮತ್ತೆ ಎರಡು ಕೊರೊನಾ ಪ್ರಕರಣ ದೃಢ – ಕಹಳೆ ನ್ಯೂಸ್

ಉಡುಪಿ, ಮಾ.29  : ಉಡುಪಿಯಲ್ಲಿ ಮತ್ತೆ ಎರಡು ಕೊರೊನಾ ಪ್ರಕರಣ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮೂರಕ್ಕೇರಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಬುಧವಾರ ಉಡುಪಿಯಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

29 ವರ್ಷದ ಹಾಗೂ 35 ವರ್ಷದ ವ್ಯಕ್ತಿಗಳಲ್ಲಿ ಕೊರೊನಾ ಪಾಸಿಟಿವ್ ಇರುವುದನ್ನು ಜಿಲ್ಲಾಡಳಿತ ಖಚಿತಪಡಿಸಿದೆ.

ಮಾರ್ಚ್ 17 ರಂದು ದುಬೈನಿಂದ ಆಗಮಿಸಿದ ಉಡುಪಿಯ 35 ವರ್ಷದ ವ್ಯಕ್ತಿ ಕೊರೊನಾ ಲಕ್ಷಣ ಕಂಡು ಬಂದ ಹಿನ್ನಲೆಯಲ್ಲಿ ಮಾರ್ಚ್ 27 ರಂದು ಕಾರ್ಕಳದ ಆಸ್ಪತ್ರೆಗೆ ದಾಖಲಾಗಿದ್ದು ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿತ್ತು. ಇಂದು ವರದಿ ಬಂದಿದ್ದು ಆತನಿಗೆ ಸೋಂಕು ತಗುಲಿರುವುದು ತಿಳಿದು ಬಂದಿದೆ. ಕೆಲಸದ ಪ್ರಯುಕ್ತ ತ್ರಿವೇಂಡ್ರಮ್‌ಗೆ ತೆರಳಿದ್ದ ಉಡುಪಿಯ 29 ವರ್ಷದ ವ್ಯಕ್ತಿ, ಕೊರೊನಾ ಲಕ್ಷಣ ಪತ್ತೆಯಾದ ಕಾರಣ ಮಾರ್ಚ್ 26 ರಂದು ಆಸ್ಪತ್ರೆಗೆ ದಾಖಲಾಗಿದ್ದ ಇಂದು ಆತನ ದ್ರವದ ಮಾದರಿಯ ವರದಿ ಪಾಸಿಟಿವ್ ಬಂದಿದೆ. ಇಬ್ಬರು ರೋಗಿಗಳನ್ನು ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಈ ಇಬ್ಬರು ಸೋಂಕಿತರ ಪೈಕಿ ಓರ್ವ ವಿದೇಶ ಪ್ರಯಾಣ ಮಾಡಿಲ್ಲ ಎಂದು ತಿಳಿದು ಬಂದಿದೆ.