Wednesday, January 22, 2025
ಸಿನಿಮಾ

ದಿನಗೂಲಿ ಕಾರ್ಮಿಕರ ಸಹಾಯಕ್ಕೆ ಮುಂದಾದ ಶೈನ್‌ ಶೆಟ್ಟಿ- ಕಹಳೆ ನ್ಯೂಸ್

ಬೆಂಗಳೂರು, ಮಾ.29 : ಈಗಾಗಲೇ ಕೊರೊನಾ ವೈರಸ್‌ಗೆ ಜನರು ತತ್ತರಿಸಿ ಹೋಗಿದ್ದಾರೆ. ಹಾಗಾಗಿ ಕೊರೊನಾ ವಿರುದ್ದ ಹೋರಾಟಕ್ಕಾಗಿ ನಟ-ನಟಿಯರು ಸಾಕಷ್ಟು ದೇಣಿಗೆ ನೀಡಲು ಮುಂದಾಗಿದ್ದಾರೆ. ಇದೀಗ ದಿನಗೂಲಿ ಕಾರ್ಮಿಕರಿಗೆ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್‌ 7ರ ವಿನ್ನರ್‌ ಶೈನ್‌ ಶೆಟ್ಟಿ ನೆರವಿಗೆ ಸ್ಪಂದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಶಿಯಲ್‌ ಮೀಡಿಯಾದಲ್ಲಿ ಶೈನ್‌ ಶೆಟ್ಟಿ ಅವರು ವಿಡಿಯೋ ಅಪ್ಲೋಡ್‌ ಮಾಡುವ ಮುಖಾಂತರ ಇತರರಿಗೂ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾನು ಬೀದಿ ಬದಿಯ ವ್ಯಾಪಾರಿ, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಫುಡ್‍ಟ್ರಕ್ ಇಟ್ಟುಕೊಂಡು ತಿಂಗಳು ಮನೆ ಬಾಡಿಗೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದೆ. ಅದರೊಂದಿಗೆ ನಟನೂ ಆಗಬೇಕೆಂಬ ಕನಸು ಕಂಡಿದ್ದೆ. ಆದರೆ ಬಿಗ್‌ಬಾಸ್‌ ಆಗದಿದ್ದರೆ ನನ್ನ ಪರಿಸ್ಥಿತಿ ಏನಾಗುತ್ತಿತ್ತು ಗೊತ್ತಿಲ್ಲ. ಬಾಡಿಗೆ, ಊಟಕ್ಕಾಗಿ ಏನು ಮಾಡಬೇಕಿತ್ತು. ಎಷ್ಟು ಕಷ್ಟಗಳನ್ನು ಎದುರಿಸಬೇಕಿತ್ತು. ನನ್ನ ಜೊತೆ ಕೆಲಸಗಾರರಿದ್ದಾರೆ. ಅವರಿಗೆ ಹೇಗೆ ಸಂಬಳ ಕೊಡುವುದು, ಊರಿಗೆ ಅವರನ್ನು ಕಳುಹಿಸುದಕ್ಕೆ ಆಗುವುದಿಲ್ಲ.ಮುಂತಾದ ಪ್ರಶ್ನೆಗಳು ಮೂಡಿದಾಗ ನನಗೊಂದು ಯೋಚನೆ ಬಂತು ಎಂದು ತಿಳಿಸಿದ್ದಾರೆ.

 

ಹಾಗಾಗಿ ಎಳನೀರು, ಹೂ ಮಾರುವವರು, ಐರನ್‌ ಅಂಗಡಿ, ಫುಡ್‌ಟ್ರಕ್‌ ಇಟ್ಟುಕೊಂಡಿರುವವರು, ಬೀದಿ ಬದಿ ವ್ಯಾಪಾರಿಗಳು, ದಿನಗೂಲಿಯವರು, ಗಾರೆಕೆಲಸಕ್ಕೆ ಹೋಗುವವರ ಬಗ್ಗೆ ಯೋಚನೆ ಮಾಡಿದಾರ ಅವರ ಪರಿಸ್ಥಿತಿ ನೋಡಿದಾಗ ಭಯವಾಗುತ್ತದೆ. ಇಡೀ ತಿಂಗಳ ರೇಷನ್, ಸಾಲಕ್ಕೆ ಬಡ್ಡಿ, ಊಟದ ಯೋಚನೆ ಬಂದಾಗ ನಾನು ನನ್ನ ತಂಡದವರು ಸೇರಿಕೊಂಡು ಇರುವಷ್ಟು ದುಡ್ಡು ಒಟ್ಟು ಹಾಕಿ, ಇವರಿಗೆಲ್ಲಾ ಸಹಾಯ ಮಾಡುವುದಕ್ಕೆ ಯೋಚನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಸದ್ಯಕ್ಕೆ ಬನಶಂಕರಿ ಹಾಗೂ ಚೆನ್ನಮ್ಮರ ಕೆರೆ ಪೊಲೀಸ್‌ ಸಿಬ್ಬಂದಿಯ ಸಹಾಯ ಪಡೆದು, ದಿನಗೂಲಿ ಕಾರ್ಮಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಸಹಕಾರ ನೀಡುತ್ತಿದ್ದೇವೆ. ಅವರಿಗೆ ಇಡೀ ತಿಂಗಳ ಮನೆ ರೇಷನ್‌ ಹಾಗೂ ಬಾಡಿಗೆ ಕೊಡುವ ಮೂಲಕ ಸಹಾಯ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮನೆಗಳನ್ನು ಬಾಡಿಗೆ ನೀಡುವವಿಗೆ ನನ್ನದೊಂದು ಮನವಿ, ನಿಮ್ಮಿಂದ ಎಷ್ಟೂ ಕಡಿಮೆ ಮಾಡುವುದಕ್ಕೆ ಆಗುತ್ತದೋ ಅಷ್ಟು ಮನೆ ಬಾಡಿಗೆಯನ್ನು ಕಡಿಮೆ ಮಾಡಿ. ಕೊರೊನಾ ವೈರಸ್‌ನಿಂದಾಗಿ ನಮ್ಮ ದೇಶದಲ್ಲಿ ಜನರು ತುಂಬಾ ಕುಗ್ಗಿಹೋಗಿದ್ದಾರೆ. ಹಾಗಾಗಿ ಅವರಿಗೆ ಒತ್ತಡ ಕೊಡಬೇಡಿ. ಎಷ್ಟು ನಿಮ್ಮಿಂದ ಸಹಕಾರ ಕೊಡಲು ಸಾಧ್ಯವೋ ಕೊಡಿ ಎಂದಿದ್ದಾರೆ.