Wednesday, January 22, 2025
ಸುದ್ದಿ

ಕೋವಿಡ್-19: ಕೇರಳ, ತಮಿಳುನಾಡಿನಲ್ಲಿ ಹೊಸ ಪ್ರಕರಣಗಳು, ಒಟ್ಟಾರೇ ದೇಶದಲ್ಲಿ 1065 ಮಂದಿಗೆ ಸೋಂಕು – ಕಹಳೆ ನ್ಯೂಸ್

ನವದೆಹಲಿ: ಕೇರಳ ಹಾಗೂ ತಮಿಳುನಾಡಿನಲ್ಲಿ ಕೋವಿಡ್ -19 ಹೊಸ ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ಈವರೆಗೂ ಸೋಂಕಿತರ ಸಂಖ್ಯೆ 1065 ಆಗಿದೆ

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಂತೆ ಭಾನುವಾರ ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಸೋಂಕಿನಿಂದ ಮೃತಪಟ್ಟರ ಸಂಖ್ಯೆ 23ಕ್ಕೆ ಏರಿಕೆ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈವರೆಗೂ ಮಹಾರಾಷ್ಟ್ರ, ಕೇರಳ, ತೆಲಂಗಾಣ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡು, ಬಿಹಾರ, ಪಂಜಾಬ್ , ದೆಹಲಿ , ಪಶ್ಚಿಮ ಬಂಗಾಳ , ಜಮ್ಮು -ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಿಂದ ಸಾವಿನ ಪ್ರಕರಣಗಳು ವರದಿಯಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮಧ್ಯೆ ಭಾರತ ಕೊರೋನಾ ವೈರಸ್ ತಡೆಗಟ್ಟುವುದಕ್ಕೆ 3 ವಾರಗಳ ಕಾಲ ಲಾಕ್ ಡೌನ್ ಘೋಷಿಸಿರುವುದು ವೈರಸ್ ಹರಡುವುದಿಕೆ ತಡೆಗೆ ಸಾಕಾಗುವುದಿಲ್ಲ ಎಂದು ಯೂನಿವರ್ಸಿಟಿ ಆಫ್ ಕೇಂಬ್ರಿಡ್ಜ್ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ನಿಯಮಿತ ಅಂತರದಲ್ಲಿ ಮೂರು ಬಾರಿ ಲಾಕ್ ಡೌನ್ ಗೆ ಕೇಂಬ್ರಿಡ್ಜ್ ಸಂಶೋಧಕರು ಸಲಹೆ ನೀಡಿದ್ದು, 5 ದಿನಗಳ ಅಂತರ ನೀಡುವುದಕ್ಕೆ ಹೇಳಿದೆ. 21 ದಿನಗಳು, 28 ದಿನಗಳು, 18 ದಿನಗಳು ಈ ಮಧ್ಯದಲ್ಲಿ 5 ದಿನಗಳ ಸಡಿಲಿಕೆ ನೀಡುವುದು ಕೊರೋನಾ ವೈರಸ್ ಹರಡುವಿಕೆ ತಡೆ ಹೋರಾಟಕ್ಕೆ ಇರುವ ಪರಿಣಾಮಕಾರಿ ಲಾಕ್ ಡೌನ್ ವಿಧಾನ ಎಂದು ಅಭಿಪ್ರಾಯಪಟ್ಟಿದ್ದಾರೆ.

ಯುರೋಪ್ ಖಂಡದಲ್ಲಿ ಈವರೆಗೂ 20 ಸಾವಿರ ಜನರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು, 3 ಲಕ್ಷಕ್ಕೂ ಅಧಿಕ ಜನರು ಸೋಂಕಿಗೆ ಒಳಗಾಗಿದ್ದಾರೆ. ಇಟಲಿಯಲ್ಲಿ 10 ಸಾವಿರ, ಸ್ಪೇನ್ ನಲ್ಲಿ 5600 ಮಂದಿ ಕೋವಿಡ್ -19 ಸೋಂಕಿನಿಂದ ಸಾವನ್ನಪ್ಪಿದ್ದಾರೆ.